ಉದಯವಾಹಿನಿ, ಹಾವೇರಿ: ‘ಭೂಮಿ ಇರುವ ರೈತರಿಗೆ ಮಾತ್ರ ಸಹಕಾರ ಸಂಘಗಳಲ್ಲಿ ಸಾಲ ನೀಡಲಾಗುತ್ತಿದೆ. ಭೂಮಿ ಇಲ್ಲದ ಜನರಿಗೂ ಸಾಲ ನೀಡುವ ಬಗ್ಗೆ ಸಂಘಗಳು ಚಿಂತನೆ ನಡೆಸಬೇಕು. ಈ ಮೂಲಕ ಆರ್ಥಿಕ ಮಟ್ಟವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು’ ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.ತಾಲ್ಲೂಕಿನ ಕುರುಬಗೊಂಡ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ‘ಕುರುಬಗೊಂಡದ ಸಹಕಾರ ಸಂಘ 75 ವರ್ಷ ಪೂರೈಸಿದ್ದು ಶ್ಲಾಘನೀಯ. ಪ್ರಾಮಾಣಿಕತೆ ಹಾಗೂ ದಕ್ಷತೆ ಇರುವ ಸದಸ್ಯರು-ಸಿಬ್ಬಂದಿ ಇದ್ದರೆ ಮಾತ್ರ ಈ ಸಾಧನೆ ಮಾಡಬಹುದು, ಇಲ್ಲದಿದ್ದರೆ, ಯಶಸ್ಸು ಸಾಧ್ಯವಿಲ್ಲ. ಸಂಘದ ಮೇಲೆ ವಿಶ್ವಾಸವಿದ್ದರೆ ಮಾತ್ರ ಜನರು ಠೇವಣಿ ಇರಿಸುತ್ತಾರೆ. ವಿಶ್ವಾಸ ಉಳಿಸಿಕೊಂಡು ಹೋದರೆ ಮಾತ್ರ ಸಂಘಗಳು ಬೆಳೆಯುತ್ತವೆ’ ಎಂದರು.

ಚಿನ್ನಾಭರಣ ಸಾಲ ನೀಡಿ: ‘ಚಿನ್ನಾಭರಣ ಸಾಲ ನೀಡಲು ಮಣ್ಯಪುರಂ ಹಾಗೂ ಮುತ್ತೂಟ ಸೇರಿದಂತೆ ವಿವಿಧ ಖಾಸಗಿ ಕಂಪನಿಗಳು ರಾಜ್ಯದಲ್ಲಿವೆ.ಚಿನ್ನಾಭರಣ ಸಾಲದ ಮೇಲೆ ಹಿಡಿತ ಸಾಧಿಸುತ್ತಿವೆ. ಇದಕ್ಕೆ ಸಹಕಾರ ಸಂಘಗಳು ಆಸ್ಪದ ನೀಡಬಾರದು. ತಮ್ಮ ವ್ಯಾಪ್ತಿಯಲ್ಲಿಯೂ ಚಿನ್ನಾಭರಣ ಸಾಲ ನೀಡುವ ಪ್ರಕ್ರಿಯೆ ಆರಂಭಿಸಬೇಕು. ತಮ್ಮೂರಿನ ಜನರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಸಚಿವ ರಾಜಣ್ಣ ತಿಳಿಸಿದರು. ಕಿರುಕುಳ ನೀಡಿದರೆ ಠಾಣೆಗೆ ದೂರು: ‘ರೈತರಿಗೆ ಶೂನ್ಯ ಬಡ್ಡಿದರ ಹಾಗೂ ಇತರೆ ಸಾಲಗಳನ್ನು ಸಹಕಾರ ಸಂಘಗಳು ನೀಡುತ್ತಿವೆ. ಇದರ ನಡುವೆಯೇ ಮೈಕ್ರೋ ಫೈನಾನ್ಸ್ ಹಾಗೂ ಇತರೆ ಕಂಪನಿಗಳ ಹಾವಳಿಯೂ ಇದೆ.

ತಿಪ್ಪಾಯಿಕೊಪ್ಪ ಜಂಗಮಕ್ಷೇತ್ರದ ಗುರು ಮೂಕಪ್ಪ ಶಿವಯೋಗಿಗಳ ಮಠದ ಮಹಾಂತ ಸ್ವಾಮೀಜಿ, ವೀರಭದ್ರಯ್ಯ ಶಾಸ್ತ್ರಿ ಹಿರೇಮಠ, ಶಾಸಕ ರುದ್ರಪ್ಪ ಲಮಾಣಿ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಕುರುಬಗೊಂಡ ಸಹಕಾರಿ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಹಾವೇರಿ, ಮುಖ್ಯ ಕಾರ್ಯನಿರ್ವಾಹಕ ಮಹಾಂತೇಶ ಪೂಜಾರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಹಾವೇರಿ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಇದ್ದರು.’ಬಡ್ಡಿ ಮನ್ನಾ: ಅವಕಾಶ ಬಳಸಿಕೊಳ್ಳದ ರೈತರು”ಸಹಕಾರ ಸಂಘಗಳಲ್ಲಿ 36000 ರೈತರ ಸುಮಾರು ₹500 ಕೋಟಿ ಸಾಲ ಬಾಕಿಯಿತ್ತು. ಸಾಲದ ಅಸಲು ತುಂಬಿದರೆ ಬಡ್ಡಿ ಮನ್ನಾ ಮಾಡುವುದಾಗಿ ತಿಳಿಸಲಾಗಿತ್ತು. ಆದರೆ ರೈತರು ಕೇವಲ ₹254 ಕೋಟಿ ಪಾವತಿ ಮಾಡಿದರು. ಉಳಿದ ಹಣ ತುಂಬಲಿಲ್ಲ. ಅವಕಾಶ ನೀಡಿದರೆ ರೈತರು ಬಳಸಿಕೊಳ್ಳಲಿಲ್ಲ’ ಎಂದು ಕೆ.ಎನ್. ರಾಜಣ್ಣ ಹೇಳಿದರು. ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ ಸಹಕಾರ ಸಂಘಗಳಿಂದ ಗೋದಾಮು ನಿರ್ಮಿಸಲು ಸರ್ಕಾರ ಆರ್ಥಿಕ ನೆರವು ನೀಡಬೇಕು’ ಎಂದು ಕೋರಿದರು.

Leave a Reply

Your email address will not be published. Required fields are marked *

error: Content is protected !!