ಉದಯವಾಹಿನಿ, ಬಾಗಲಕೋಟೆ: ಜಲವನ್ನು ಪೂಜಿಸುವ, ಮಳೆ ಸೂಚನೆ ನೀಡುವ ಶ್ರೀ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಹೊಸ ಮುರನಾಳ ಗ್ರಾಮದಲ್ಲಿ ಅದ್ದೂರಿಯಾಗಿ ಸಹಸ್ರಾರು ಭಕ್ತರ ಮದ್ಯ ಮಹಾರಥೋತ್ಸವ ಜರುಗಿತು.

ಬೆಳಿಗ್ಗೆ ಶ್ರೀ ಮಳೆರಾಜೇಂದ್ರಸ್ವಾಮಿಯ ಮೂರ್ತಿಗೆ ಅಭಿಷೇಕ ಮಹಾಮಂಗಳಾರುತಿ,ಭಗವತದ್ಗೀತಾ ಪಾರಾಯಣ ನಡೆಯಿತು. ವಿಶೇಷ ಪುಷ್ಪಾಲಂಕಾರದೊಂದಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು, ಹರಕೆಹೊತ್ತ ಅನೇಕಭಕ್ತಾದಿಗಳು ಧೀರ್ಘದಂಡ ನಮಸ್ಕಾರಗಳನ್ನು ಹಾಕಿ ತಮ್ಮ ಹರಕೆ ತೀರಿಸಿಕೊಂಡರು, ಮಧ್ಯಾಹ್ನ ಸಾವಿರಾರು ಮಹಿಳೆಯರ ಆರತಿ ಸೇವೆಯೊಂದಿಗೆ ಶ್ರೀ ಸ್ವಾಮಿಯ ಮೂರ್ತಿಹೊತ್ತ ಪಲ್ಲಕ್ಕಿ, ಕುದುರೆಯನ್ನೆರಿದ ಶ್ರೀ ಮೇಘರಾಜಸ್ವಾಮಿಗಳು ನಂದಿಕೋಲು ಪುರವಂತರ ಸೇವೆಯೊಂದಿಗೆ ಭಾಜಾ ಭಜಂತ್ರಿ ಕರಡಿಮಜಲು ಸಂಭ್ರಮದೊಂದಿಗೆ ಸಣ್ಣ ರಥೋತ್ಸವ (ಉಚ್ಚಯ್ಯ) ಜರುಗಿತು.
ಆರತಿ ಸೇವೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಡಿದ್ದರು. ಮುಸ್ಲಿಂ ಮಹಿಳೆಯರು ದೀಪದಆರತಿಗಳಿಗೆ ಎಣ್ಣೆ ನೀಡಿ ತಮ್ಮ ಸೇವೆಯನ್ನು ಮಾಡಿದರು, ಸಣ್ಣ ರಥೋತ್ಸವ ಮಠದ ನಂತರ ಶ್ರೀಮಠದಲ್ಲಿ ಮಳೆರಾಜೇಂದ್ರಸ್ವಾಮಿ ಮೂರ್ತಿಗೆ ಮಠದ ಪೂಜ್ಯರಾದ ಮೌನೇಶ್ವರ ಸ್ವಾಮಿಗಳಿಗೆ ಸಕಲ ಭಕ್ತಾದಿಗಳೊಡನೆ ವಿಶೇಷ ಮಂಗಳಾರತಿ ನೆರೆವೇರಿಸಿದರು.

ಸಂಜೆ ಸಹಸ್ರಾರು ಜನರ ಮಧ್ಯೆ ಜಗದ್ಗುರು ಶ್ರೀ ಮಳೆರಾಜೇಂದ್ರಸ್ವಾಮಿಯ ಮಹಾರಥೋತ್ಸವ ಜರುಗಿತು. ನಂತರ ಜಾತ್ರೆಯಲ್ಲಿ ಪಾಲ್ಗೊಂಡ ಸಕಲ ಭಕ್ತಾದಿಗಳು ಮಹಾಪ್ರಸಾದ ನೆರೆವೇರಿಸಿದರು, ಹಿಂದು ಮುಸ್ಲಿಂ ಭಾವೈಕ್ಯತೆಯ ಮಠವಾಗಿದ್ದರಿಂದ ಸಕಲ ಧರ್ಮದವರು ಪಾಲ್ಗೊಂಡಿದ್ದರು.ಶ್ರೀಮಠದ ಮಠಾಧಿಶರಾದ ಮೌನೇಶ್ವರಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಜಾತ್ರೆಯಲ್ಲಿ ಗ್ರಾಮದ ಹಿರಿಯರು ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಭಕ್ತಾಧಿಗಳು ಪಾಲ್ಗೊಂಡಿದ್ದರು. ಜಾತ್ರೆಯಲ್ಲಿ ಗ್ರಾಮದ ಯುವಕರಿಂದ ಆರತಿಸೇವೆಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಹಾಗೂ ಭಕ್ತಾದಿಗಳಿಗೆ ತಂಪುಪಾನಿಯ ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!