ಉದಯವಾಹಿನಿ, ವಾಷಿಂಗ್ಟನ್: ಆರ್ಥಿಕ ಹಿಂಜರಿತದ ಸಂಭವನೀಯತೆಯ ಭೀತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆಡಳಿತ ಯಂತ್ರ ಸ್ಥಗಿತವಾಗುವ ಆತಂಕಗಳ ನಡುವೆ ಅಮೆರಿಕದ ಷೇರುಮಾರುಕಟ್ಟೆಯಲ್ಲಿ ಭಾರೀ ಕುಸಿತ ಉಂಟಾಗಿದೆ. ಕಳೆದ ವಾರದ ತ್ವರಿತ ಮಾರಾಟ ಮುಂದುವರೆದಿದ್ದು, ಎಲ್ಲಾ ಮೂರು ಪ್ರಮುಖ ಸೂಚ್ಯಂಕಗಳು ತೀವ್ರ ನಷ್ಟ ಪ್ರದರ್ಶಿಸಿದೆ.
ಫೆಬ್ರವರಿ 19ರಂದು ಸಾರ್ವಕಾಲಿಕ ಜಿಗಿತ ಕಂಡಿದ್ದ ಎಸ್‌ಆ್ಯಂಡ್‌ಪಿ 500 ಈಗ ಶೇ.8ರಷ್ಟು ಇಳಿಕೆ ಕಂಡಿದೆ. ನಾಸ್‌ಡಾಖ್ ಕಾಂಪೋಸಿಟ್ ಡಿಸೆಂಬರ್ ತಿಂಗಳ ಏರಿಕೆ ಬಳಿಕ ಶೇ.10ಕ್ಕೂ ಅಧಿಕ ವೈಫಲ್ಯ ಕಂಡಿದೆ. ಆರ್ಥಿಕ ಅನಿಶ್ಚಿತತೆ, ಸಂಭಾವ್ಯ ಹಿಂಜರಿತದ ಭೀತಿ ಮತ್ತು ವ್ಯಾಪಾರದ ಒತ್ತಡಗಳ ಹೆಚ್ಚಳವು ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ ಲಕ್ಷಾಂತರ ಕೋಟಿ ರೂ.ಗಳ ನಷ್ಟವನ್ನುಂಟು ಮಾಡಿದೆ.
ಈ ಕುಸಿತಕ್ಕೆ ಅಧಿಕ ಷೇರು ಮೌಲ್ಯಮಾಪನ, ಬದಲಾಗುತ್ತಿರುವ ವ್ಯಾಪಾರದ ನೀತಿಗಳಿಂದಾಗುತ್ತಿರುವ ಆರ್ಥಿಕ ಅನಿಶ್ಚಿತತೆ ಮತ್ತು ನಿರಾಶಾದಾಯಕ ಕಾರ್ಪೋರೇಟ್ ಗಳಿಕೆಗಳು ಕಾರಣವಾಗಿವೆ. ಉದಾಹರಣೆಗೆ ಟೆಸ್ಲಾ ಕಂಪನಿ ಒಂದೇ ದಿನ 125 ಶತಕೋಟಿ ಡಾಲರ್‌ಗಳಿಗೂ ಅಧಿಕ ಮಾರುಕಟ್ಟೆ ಮೌಲ್ಯ ಕಳೆದುಕೊಂಡಿದೆ. ಮಿಗಿಲಾಗಿ ಡೆಲ್ಟಾ ಏರ್‌ಲೈನ್ಸ್ ನಂತಹ ಕಂಪನಿಗಳು ಲಾಭ ಗಳಿಕೆಯ ಮುನ್ನೋಟಗಳನ್ನು ಕಡಿತಗೊಳಿಸಿವೆ.
ಆರ್ಥಿಕ ಸ್ಥಿತಿಗಳ ಕುರಿತು ಆತಂಕವನ್ನು ಉದಹರಿಸಿವೆ. ಮುಂಬರುವ ಹಣದುಬ್ಬರ ವರದಿಗಳು ಬಡ್ಡಿದರ ನೀತಿಗಳು ಮತ್ತು ಆರ್ಥಿಕತೆ ಸ್ಥಿರೀಕರಣಕ್ಕೆ ಸಮರ್ಥ ಸರ್ಕಾರಿ ಕ್ರಮಗಳ ನಿರೀಕ್ಷೆಯಲ್ಲಿ ಹೂಡಿಕೆದಾರರು ಇದ್ದಾರೆ.ಕೆನಡಾ, ಮೆಕ್ಸಿಕೋ ಮತ್ತು ಯೂರೋಪ್‌ನ ಜೊತೆ ಸುಂಕ ಸಮರದಿಂದ ಅನಿಶ್ಚತತೆ ತೀವ್ರವಾಗಿದೆ. ಆ್ಯಪಲ್ ಮತ್ತು ಎನ್‌ವಿಡಿಯಾ ಶೇ.5ರಷ್ಟು ಕುಸಿತ ಕಂಡಿವೆ. ಎಸ್ ಆ್ಯಂಡ್‌ಪಿ 500ರ ತಂತ್ರಜ್ಞಾನ ಕ್ಷೇತ್ರ ಒಟ್ಟಾರೆ ಶೇ.4.3ರಷ್ಟು ಕುಸಿತಕ್ಕೆ ಸಾಕ್ಷಿಯಾಗಿದೆ. ಈ ನಡುವೆ ಡೆಲ್ಟಾ ಏರ್‌ಲೈನ್‌್ಸನ ಷೇರುಗಳು ಶೇ.14ರಷ್ಟು ಮೌಲ್ಯ ಕಳೆದುಕೊಂಡಿವೆೆ.
