ಉದಯವಾಹಿನಿ, ಬೆಂಗಳೂರು : ಪಾಕಿಸ್ತಾನಕ್ಕೆ ರಕ್ಷಣಾ ಮಾಹಿತಿ ಗಳನ್ನು ರವಾನಿಸುತ್ತಿದ್ದಾನೆಂಬ ಶಂಕೆ ಮೇರೆಗೆ ಬಿಇಎಲ್‌ ಕಾರ್ಖಾನೆಯ ನೌಕರನೊಬ್ಬನನ್ನು ಗುಪ್ತ ದಳದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಮತ್ತಿಕೆರೆಯಲ್ಲಿ ವಾಸವಿರುವ ಮೂಲತಃ ಉತ್ತರ ಪ್ರದೇಶದ ಗಾಜಿಯಾಬಾದ್‌ ನಿವಾಸಿ ನಗರದ ಬಿಇಎಲ್‌ ಕಾರ್ಖಾನೆಯ ಪ್ರಾಡೆಕ್ಟ್‌ ಡೆವಲಪ್‌ಮೆಂಟ್‌ ಆ್ಯಂಡ್‌ ಇನ್ನೋವೇಶನ್‌ ಸೆಂಟರ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದನು. ಬಿಇಎಲ್‌ ನಿಂದ ಪಾಕಿಸ್ತಾನಕ್ಕೆ ರಕ್ಷಣಾ ಮಾಹಿತಿಗಳನ್ನು ರವಾನಿಸುತ್ತಿದ್ದಾನೆಂಬ
ಶಂಕೆ ಮೇರೆಗೆ ಕೇಂದ್ರ ಗುಪ್ತಚರ ದಳ, ಕರ್ನಾಟಕ ರಾಜ್ಯ ಗುಪ್ತದಳ ಹಾಗೂ ಸೇನಾ ಗುಪ್ತದಳ ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿವೆ.ಆತ ಬಳಸುತ್ತಿದ್ದ ಲ್ಯಾಪ್‌ಟಾಪ್‌, ಮೊಬೈಲ್‌ನ್ನು ವಶಕ್ಕೆ ಪಡೆದಿರುವ ಗುಪ್ತದಳದ ಅಧಿಕಾರಿಗಳು ಅದರಲ್ಲಿರುವ ಮಾಹಿತಿಗಳನ್ನು ಪರಿಶೀಲಿಸುತ್ತಿದ್ದಾರೆ.
ಉತ್ತರ ಪ್ರದೇಶದ ಖಾನ್‌ಪುರದಲ್ಲಿ ಶಸಾ್ತ್ರಸ್ತ್ರ ಕಾರ್ಖಾನೆಯ ಜ್ಯೂನಿಯರ್‌ ಮ್ಯಾನೇಜರ್‌ ಕುಮಾರ್‌ ವಿಕಾಸ್‌‍ ಎಂಬಾತನನ್ನು ಭಯೋತ್ಪಾದಕ ನಿಗ್ರಹ ದಳ ಬಂಧಿಸಿತ್ತು. ಇದಕ್ಕೂ ಮುಂಚೆ ಮಾರ್ಚ್‌ 13 ರಂದು ಫಿರೋಜ ಬಾದ್‌ನ ಅಜ್ರತ್‌ಪುರ್‌ನಲ್ಲಿ ಮತ್ತೊಬ್ಬನನ್ನು ಪಾಕ್‌ಗೆ ಗುಪ್ತ ಚರ ಮಾಹಿತಿ ರವಾನೆ ಆರೋಪದಲ್ಲಿ ಬಂಧಿಲಾಗಿತ್ತು.

Leave a Reply

Your email address will not be published. Required fields are marked *

error: Content is protected !!