ಉದಯವಾಹಿನಿ, ಸಿಂಧನೂರು: ಹಿಂದೆ ಎಲ್ಲಾ ರಾಜಕೀಯ ಪಕ್ಷಗಳು ಹೊಂದಾಣಿಕೆ ರಾಜಕೀಯ ಮಾಡುತ್ತಾ ಬಂದಿದ್ದು ಇಲ್ಲಿ ಸಂಸದರಾದ ಪ್ರತಾಪ್ ಸಿಂಹ ಹೇಳಿರುವುದು ಸತ್ಯ ವಾದ ಮಾತು ಎಂದು ಪ್ರತಾಪ್ ಸಿಂಹ ಅವರ ಪರ ಬೆಂಬಲಿತವಾಗಿ ಮಾತನಾಡಿದರುನಗರದ ಕನಕ ದಾಸ ಕಲ್ಯಾಣ ಮಂಟಪದಲ್ಲಿ ಸುದ್ದಿ ಗೋಷ್ಠಿ ಕರೆದು ಮಾತನಾಡಿದ ಕೆಪಕ್ ಮಾಜಿ ಅಧ್ಯಕ್ಷರಾದ ಕೆ ವಿರುಪಾಕ್ಷಪ್ಪ ಹಿಂದಿ ಎಲ್ಲಾ ರಾಜಕೀಯ ಪಕ್ಷಗಳು ಎಲ್ಲಾ ರೀತಿಯಲ್ಲಿ ಹೊಂದಾಣಿಕೆಯ ರಾಜಕೀಯ ಮಾಡುತ್ತಾ ಬಂದಿದ್ದು ಇದೇ ಏನು ಹೊಸದೇನಲ್ಲ ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಆರೋಪ ಮಾಡಿದರು ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ಇದೆ ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ಆಡಿರುವ ಮಾತುಗಳು ಎಲ್ಲಾ ಪಕ್ಷಗಳ ರಾಜಕೀಯ ವ್ಯಕ್ತಿಗಳಿಗೆ ಗ್ರಾಸವಾಗಿದೆ ಎಂದು ಹೇಳಿದರು ಆದರೆ ಪ್ರತಾಪ್ ಸಿಂಹ ಅವರಿಗೆ ರಾಜಕೀಯದ ಬಹಳಷ್ಟು ಅನುಭವ ಇಲ್ಲದೆ ಇರಬಹುದು ಆದರೆ ಅವರು ಮಾತುಗಳಲ್ಲಿ ಸತ್ಯಾಸತ್ಯತೆ ಅಡಗಿದೆ ಎಂದು ಕೆ ವಿರುಪಾಕ್ಷಪ್ಪ ನವರ ವಿವರಿಸಿದ್ದಾರೆ
ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಮೇಲೆ ನಮ್ಮ ಬಿಜೆಪಿ ಪಕ್ಷದ 40% ಭ್ರಷ್ಟಾಚಾರ ಸೋಲಾರ್ ಅರ್ಕಾವತಿ ಭ್ರಷ್ಟಾಚಾರ ಬಿಜೆಪಿ ಪಕ್ಷದ ಮೇಲೆ ಗೋಬೆ ಕೊಡಿಸಿ ಅಧಿಕಾರಕ್ಕೆ ಬಂದಿದೆ ಈಗ ಅವುಗಳಲ್ಲಿ ತನಿಖೆ ಮಾಡಿಲಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಸವಾಲ್ ಹಾಕಿದರು 2023 ರ ಸಾರ್ವತ್ರಿಕ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷ ತಮ್ಮ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಕೂಡ ವುದಾಗಿ ಹೇಳಿಕೆ ನೀಡಿದ್ದಾರೆ ಈಗ ಅದನ್ನು ಪಾಲಿಸಿ ಸುಮ್ಮನೆ ಕೇಂದ್ರ ಸರ್ಕಾರ ಅಕ್ಕಿ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರವನ್ನು ಬಡವರು ವಿರೋಧಿ ಎಂದು ಹಣೆಪಟ್ಟಿ ನೀಡುವುದು ಸರಿಯಲ್ಲ ಎಂದು ಹೇಳಿದರು .ಏಕೆಂದರೆ ಚುನಾವಣೆ ಸಂದರ್ಭದಲ್ಲಿ 10 ಕೆಜಿ ಅಕ್ಕಿ ಕೊಡ್ತೀವಿ ಅಂತ ತಮ್ಮ ಪ್ರಣಾಳಿಕೆಯಲ್ಲಿ ಸಾರ್ವಜನಿಕರು ಸಭೆಯಲ್ಲಿ ಮಾತನಾಡಿದರು ಕೇಂದ್ರ ಸರ್ಕಾರ 5 ಕೆಜಿ ಕೊಡುತ್ತದೆ ನಾವು 5 ಕೆಜಿ ಕೊಡುತ್ತವೆ ಎಂದು ಎಂದು ಎಲ್ಲಿ ಸಹ ಹೇಳಿರುವುದಿಲ್ಲ.ನಾವು 10 ಕೆಜಿ ಅಕ್ಕಿ ಕೊಡ್ತೀವಿ ಅಂತ ಹೇಳಿದ್ದೀರಿ ಈಗ ಅದನ್ನು ಪಾಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು ಈ ಸಂದರ್ಭದಲ್ಲಿ ಕೆ ಮರಿಯಪ್ಪ ವೆಂಕನಗೌಡ ಮಲ್ಕಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!