
ಉದಯವಾಹಿನಿ,ಶಿಡ್ಲಘಟ್ಟ : ಸರ್ಕಾರದಿಂದ ಸಿಗುವ ಮೂಲಭೂತ ಸೌಕರ್ಯಗಳು ಕಟ್ಟ ಕಡೆಯ ವ್ಯಕ್ತಿಗೂ ಸಿಗಬೇಕು. ಯಾವುದೇ ದಲ್ಲಾಳಿಗಳ ಹಾವಳಿ ಇಲ್ಲದೆ ನೇರವಾಗಿ ಬಡಬಗ್ಗರಿಗೆ ಸಿಗುವಂತೆ ಮಾಡಬೇಕು ಎಂದು ಶಾಸಕ ಬಿಎನ್ ರವಿಕುಮಾರ್ ತಿಳಿಸಿದರು. ತಾಲೂಕಿನ ಅಬ್ಲೂಡು ಗ್ರಾಮದ ಗ್ರಾಮಪಂಚಾಯಿತಿ, ಪಶುವೈಧ್ಯಕೀಯ ಆಸ್ಪತ್ರೆ,ಅಂಗನವಾಡಿ ಹಾಗೂ ಗ್ರಂಥಾಲಯದ ನೂತನ ಕಟ್ಟಡಗಳ ಭೂಮಿ ಪೂಜೆ ಮಾಡಿ ವೇದಿಕೆಯಲ್ಲಿ ಮಾತನಾಡಿದರು.
ತಾಲ್ಲೂಕಿನಲ್ಲಿ ಅತಿ ಹೆಚ್ಚು ರೈತರು ಇರುವುದರಿಂದ ಅಧಿಕಾರಿಗಳು ರೈತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ನೇರವಾಗಿ ರೈತರಿಗೆ ಸಿಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು.ಈ ಕ್ಷೇತ್ರ ಬಹಳ ಹಿಂದುಳಿದಿದೆ, ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಶಂಕುಸ್ಥಾಪನೆ ಮಾಡುತ್ತಿರುವುದು ಸಂತಸ ತಂದಿದೆ. ಈ ಕಟ್ಟಡ ನಿರ್ಮಾಣವಾಗಲು ಸುಮಾರು 45 ಲಕ್ಷಕ್ಕೂ ಹೆಚ್ಚು ಮೊತ್ತ ಬೇಕಾಗುತ್ತದೆ ಈಗಾಗಲೇ ನರೇಗಾ ಯೋಜನೆ ಅಡಿ 35 ಪಾಯಿಂಟ್ 50 ಲಕ್ಷ ಹಾಗೂ 15ನೇ ಹಣಕಾಸು ಅನುದಾನದಲ್ಲಿ 2.10 ಲಕ್ಷ ವಾಗಿದೆ ಇನ್ನ ಉಳಿದಂತೆ ಬೇಕಾಗಿರುವ ಮೊತ್ತವನ್ನು ಶಾಸಕರ ಅನುದಾನದಿಂದ ನೀಡುತ್ತೇನೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಇಒ ಮುನಿರಾಜ,ಬಂಕ್ ಮುನಿಯಪ್ಪ,ಹುಜಗೂರು ರಾಮಣ್ಣ,ತಾದೂರು ರಘು,ಗ್ರಾಪಂ ಅಧ್ಯಕ್ಷೆ ನಿರ್ಮಲಾ ಬೈರೇಗೌಡ,ಉಪಾಧ್ಯಕ್ಷ ನಾರಾಯಣಸ್ವಾಮಿ,ಕೃಷಿ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ನಾರಾಯಣಸ್ವಾಮಿ,ಜೆವಿ ಸದಾಶಿವ,ಮುನಿವೆಂಕಟಸ್ವಾಮಿ,ಎಸ್ ಎಂ ರಮೇಶ್,ಚಿಕ್ಕತೇಕಹಳ್ಳಿ ಸಿ ವೆಂಕಟೇಶಪ್ಪ,ಅಬ್ಲೂಡು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಮುಖಂಡರು ಹಾಜರಿದ್ದರು.
