ಉದಯವಾಹಿನಿ,ಕೆ.ಆರ್.ಪುರ : ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು ತಿಳಿಸಿದರು.ಮಹದೇವಪುರ ಕ್ಷೇತ್ರದ ಕಾಡುಗೋಡಿ,ಹೂಡಿ,ವೈಟ್ ಫೀಲ್ಡ್ ಸೇರಿದಂತೆ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.ಬೇಸಿಗೆಯಲ್ಲಿ ಕಾವೇರಿ ನೀರನ್ನು ಸರ್ಮಪಕವಾಗಿ ನೀಡುವ ಮೂಲಕ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವುದರ ಜೋತೆಗೆ ಖಾಸಗಿ ನೀರಿನ ಟ್ಯಾಂಕರ್ ಮೂಲಕ ತುರ್ತು ಭಾಗಗಳಲ್ಲಿ ನೀರಿನ ವ್ಯವಸ್ಥೆ ಮಾಡಬೇಕು ಎಂದು ನುಡಿದರು.
ಗರುಡಾಚಾರ್‌ಪಾಳ್ಯದ ಶೆಟ್ಟಿ ಲೇಔಟ್‌ನಲ್ಲಿ ಯುಜಿಡಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ, ಕಾಡುಗೋಡಿಯ ಪಟಾಲಮ್ಮ ಲೇಔಟ್‌ನಲ್ಲಿ ಹಾಗೂ ಗೋಡೌನ್ ರಸ್ತೆಯಲ್ಲಿ ಕಾವೇರಿ ಕುಡಿಯುವ ನೀರಿನ ಸರಬರಾಜು ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಮುನ್ನೇಕೊಳಾಲ ಗ್ರಾಮದ ಲಕ್ಷ್ಮೀನಾರಾಯಣ ದೇವಸ್ಥಾನದ ಹತ್ತಿರ ಗ್ರೀನ್ ಗಾರ್ಡನ್ ಲೇಔಟ್, ಸಿ. ಕೆ. ಬಿ. ಲೇಔಟ್, ಲಕ್ಷ್ಮೀನಾರಾಯಣ ದೇವಸ್ಥಾನ ರಸ್ತೆ ಹಾಗೂ ಮಂಜುನಾಥ ಲೇಔಟ್‌ನಲ್ಲಿ ಮಿಸ್ಸಿಂಗ್ ಬಿಟ್ ಯುಜಿಡಿ ಪೈಪ್‌ಲೈನ್ ಹಾಗೂ ಕಾವೇರಿ ಕುಡಿಯುವ ನೀರಿನ ಸರಬರಾಜು ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಕೊಡಿಗೇಹಳ್ಳಿ ರಸ್ತೆಯ ಆಲ್ಫಾ ಲೇಔಟ್‌ನಲ್ಲಿ ಕಾವೇರಿ ಕುಡಿಯುವ ನೀರಿನ ಸರಬರಾಜಿಗೆ ಚಾಲನೆ ನೀಡಿ ಮಳೆಗಾಲ ಪ್ರಾರಂಭಕ್ಕೂ ಮುನ್ನವೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಗುಣಮಟ್ಟದ ಕಾಮಗಾರಿಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನಿಗದಿತ ಸಮಯಕ್ಕೆ ಸರಿಯಾಗಿ ಸುಸಜ್ಜಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುಬೇಕು ಎಂದು ತಿಳಿಸಿದರು.
ಮಾಜಿ ಪಾಲಿಕೆ ಸದಸ್ಯ ಹಗದೂರು ಶ್ರೀನಿವಾಸ್, ಮಂಡಲ ಅಧ್ಯಕ್ಷರಾದ ಎನ್. ಆರ್. ಶ್ರೀಧರ್ ರೆಡ್ಡಿ, ಪಿಳ್ಳಪ್ಪ,ಮುಖಂಡರಾದ ಮಧು,ಆರ್.ಡಬ್ಲುಡಿ ಗ್ರಾಮಾಂತರ ಮಂಡಲ ಪ್ರಧಾನಕಾರ್ಯದರ್ಶಿ ರಾಜೇಶ್ ರೆಡ್ಡಿ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!