ಉದಯವಾಹಿನಿ, ಚಿಕ್ಕಬಳ್ಳಾಪುರ : ಸನಾತನ ಹಿಂದೂ ಧರ್ಮ ಪಾಲನೆ ಮಾಡುವವರಿಗೆ ಪ್ರತಿ ವರ್ಷ ಚೈತ್ರ ಮಾಸದ ಮೊದಲನೆಯ ದಿನ ಅತ್ಯಂತ ಮಹತ್ವಪೂರ್ಣವಾಗಿದ್ದು ಯುಗಾದಿ ಹಬ್ಬವಾಗಿ ಆಚರಿಸುವರು ಪ್ರತಿ ವರ್ಷ ಬರುವ ಯುಗಾದಿಗೆ ಒಂದೊಂದು ಹೆಸರು ಇದ್ದು ೨೦೨೫ ಮಾರ್ಚ್ ೩೦ರಂದು ಬರುವ ಶ್ರೀ ವಿಶ್ವ ವಸು ನಾಮ ಸಂವತ್ಸರ ಎಂಬ ಹೆಸರಿನಿಂದ ಆಚರಿಸಲ್ಪಡುವರು.
ಯುಗಾದಿ ಹಬ್ಬದ ಶುಭದಿನದಂದು ಮನುಷ್ಯನಿಗೆ ಆಯಸ್ಸು ಆರೋಗ್ಯ ವೃದ್ಧಿಸಲಿಂದು ದೇವರ ಮುಂದೆ ಈ ಮಂತ್ರವನ್ನು ಪಠಣ ಮಾಡುತ್ತಾರೆ ಅದಂದರೆ
ಶತಾಯುರ್ ವಜ್ರ ದೇಹಾಯ ಸರ್ವಸಂಪತ್ ಕರಾಯಚ
ಸರ್ವ ರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಿಣಂ ಎಂದು ಹೇಳಿ ದೇವರ ಪ್ರಸಾದವೆಂದು ಇಟ್ಟಿದ್ದ ಬೇವು ಮತ್ತು ಬೆಲ್ಲವನ್ನು ಸ್ವೀಕರಿಸಿ ಯುಗಾದಿ ಹಬ್ಬಕ್ಕೆ ಶುಭ ಆರಂಭವನ್ನು ಮಾಡುವರು.
ಯುಗಾದಿ ಹಬ್ಬ ಎಂದರೆ ಅದು ಕೇವಲ ಹಿಂದೂ ಧರ್ಮ ಪಾಲನೆಯವರಿಗೆ ಮಾತ್ರ ಅಲ್ಲ ಶುಭದಿನದಂದು ಪ್ರಕೃತಿಯು ಸಹ ಬದಲಾವಣೆ ಹೊಂದುತ್ತದೆ ಪ್ರಕೃತಿಯಲ್ಲಿ ಬದಲಾವಣೆ ಹೊಂದಿ ಮರ ಗಿಡಗಳಲ್ಲಿ ಹಳೆಯ ಎಲೆಗಳಲ್ಲ ಉದುರಿ ಹೋಗಿ ಹೊಸ ಎಲೆಗಳು ಬರುತ್ತದೆ.ಪ್ರಕೃತಿಯ ಸಿರಿಯ ಸೊಬಗು ಮತ್ತಷ್ಟು ಹೆಚ್ಚಾಗುತ್ತದೆ.
ಪ್ರತಿ ವರ್ಷ ಚೈತ್ರ ಮಾಸದ ಮೊದಲನೇ ದಿನದ ಮತ್ತೊಂದು ಮಹತ್ವ ಎಂದರೆ ತ್ರಿಮೂರ್ತಿಗಳಲ್ಲಿ ಸೃಷ್ಟಿಕರ್ತನಾದ ಬ್ರಹ್ಮದೇವ ಜಗತ್ತನ್ನು ಸೃಷ್ಟಿ ಮಾಡಿಸಲು ಆರಂಭ ಮಾಡಿದ ದಿನವೆಂದು ಪ್ರತೀ ರೀತಿ ಇದೆ ಹಾಗಾಗಿ ಇದು ಯುಗಕ್ಕೆ ಆದಿ ಅಂದರೆ ಯುಗದ ಆದಿ ಯುಗಾದಿ ಎಂದು ಸಹ ಕರೆಯುತ್ತಾರೆ.
ಯುಗಾದಿಯ ದಿನದಂದು ಆರಂಭಗೊಳ್ಳುವುದು ಪಂಚಾಂಗ ಪಂಚಾಂಗದಲ್ಲಿ ಎಲ್ಲಾ ವೈಶಿಷ್ಟ್ಯಗಳು ಹೊಂದಿರುತ್ತದೆ ಪಂಚಾಂಗ ಶ್ರವಣ ಮಾಡುವುದು ಸಹ ಯುಗಾದಿ ಹಬ್ಬದಿಂದ ಆರಂಭಗೊಳ್ಳುತ್ತದೆ. ಗ್ರಹಗತಿಗಳ ರಾಶಿಕೂಟಗಳ ವಿವರಣೆಗಳು ಪ್ರತಿಯೊಬ್ಬ ಮನುಷ್ಯನ ಆದಾಯ ಮತ್ತು ಖರ್ಚಿನ ವಿವರಗಳು ಸಂಬಂಧಕ್ಕೆ ರಾಶಿಕೂಟ ಮುಂತಾದವುಗಳನ್ನು ಒಳಗೊಂಡಿರುವ ಪಂಚಾಂಗ ಪ್ರತಿವರ್ಷ ಯುಗಾದಿ ಎಂದೆ ಆರಂಭಗೊಳ್ಳುತ್ತದೆ ಇದು ಒಂದು ವಿಶೇಷವಾಗಿದೆ.

 

Leave a Reply

Your email address will not be published. Required fields are marked *

error: Content is protected !!