ಉದಯವಾಹಿನಿ, ಬೆಂಗಳೂರು: ಹಾಲು ಒಕ್ಕೂಟಗಳ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಇತ್ತೀಚೆಗೆ ತೆಗೆದುಕೊಂಡಿದ್ದ ತೀರ್ಮಾನದಂತೆ ನಾಳೆಯಿಂದಲೇ ರಾಜ್ಯಾದ್ಯಂತ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ಪ್ರತಿ ಲೀಟರ್‌ 4 ರೂ. ಹೆಚ್ಚಳ ಆಗಲಿದೆ.ಈ ಹಿಂದೆ 2023ರ ಆಗಸ್ಟ್‌ 3 ಹಾಗೂ 2024ರ ಜೂನ್‌ 2ರಲ್ಲಿ ಹಾಗೂ 2025 ಮಾರ್ಚ್‌ನಲ್ಲಿ ಏರಿಕೆ ಮಾಡಲಾಗಿತ್ತು. ಈಗ ಮತ್ತೆ 4 ರೂ. ಏರಿಕೆ ಮಾಡಲಾಗಿದೆ. ಈ ಮೂಲಕ ರೈತರಿಗೆ ಲಾಭ ಕೊಟ್ಟರೂ ಗ್ರಾಹಕರ ಮೇಲೆ ಹೊಡೆತ ಬಿದ್ದಿದೆ.
ನೂತನ ಪರಿಷ್ಕೃತ ದರವು ಮಂಗಳವಾರ ಜಾರಿಯಾಗಲಿದ್ದು, ಜನ ಸಾಮಾನ್ಯರಿಗೆ ಹಾಲಿನ ದರ ಏರಿಕೆಯ ಬರೆ ಬೀಳಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಹಾಲಿನ ದರ ಏರಿಕೆಯ ಬಿಸಿ ತಟ್ಟಲಿದೆ.ಬಸ್‌‍, ಮೆಟ್ರೋ, ವಿದ್ಯುತ್‌ ಬಳಿಕ ಕೆಎಂಎಫ್‌ ನಂದಿನಿ ಹಾಲಿನ ದರ ಏರಿಕೆ ದೊಡ್ಡ ಹೊರೆಯಾಗಿದೆ.
ಹಾಲು ಒಕ್ಕೂಟ ಹಾಗೂ ರೈತರಿಂದ ಹಾಲು ದರ ಹೆಚ್ಚಳಕ್ಕೆ ಬೇಡಿಕೆ ನಿರಂತವಾಗಿ ಹೆಚ್ಚಿದ ಹಿನ್ನೆಲೆ ಪ್ರತಿ ಲೀಟರ್‌ ಹಾಲಿನ ದರ 4ರೂ. ಹೆಚ್ಚಳ ಮಾಡಲಾಗಿದೆ. ರೈತರಿಗೆ ಇದರಿಂದ ಅನುಕೂಲವಾದರೂ ಗ್ರಾಹಕರಿಗೆ ಇದೊಂದು ಬರೆ ಅಂತ ಜನರು ಆಕ್ರೋಶ ಹೊರಹಾಕಿದ್ದಾರೆ.

ದರ ಪರಿಷ್ಕರಿಸುವಂತೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಸಲ್ಲಿಸಿದ್ದ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಕಳೆದ ಗುರುವಾರ ಒಪ್ಪಿಗೆ ನೀಡಿತ್ತು.ಹೆಚ್ಚಳ ಮಾಡಿದ ಸಂಪೂರ್ಣ ಮೊತ್ತವನ್ನು ಹಾಲು ಉತ್ಪಾದಕರಿಗೆ ನೇರವಾಗಿ ನೀಡಲಾಗುತ್ತದೆ ಸದ್ಯ ರೈತರಿಗೆ ಪ್ರತಿ ಲೀಟರ್‌ ಹಾಲು ಶೇಖರಣೆಗೆ ಕೆಎಂಎಫ್‌ 31.68 ದರ ನೀಡುತ್ತಿದೆ. ಹಾಲಿನ ಮಾರಾಟ ದರ ಪರಿಷ್ಕರಣೆಯ ನಂತರ 35.68 ಸಿಗಲಿದೆ. 2024ರ ಜೂನ್‌ 26ರಂದು ಪ್ರತಿ ಲೀಟರ್‌ ಹಾಲಿಗೆ ಹೆಚ್ಚುವರಿಯಾಗಿ 50 ಮಿಲಿಯಷ್ಟು ನೀಡಿ ದರವನ್ನು 2ರಂತೆ (42ರಿಂದ 44) ಹೆಚ್ಚಿಸಲಾಗಿತ್ತು. ಈ ಹೆಚ್ಚಳವನ್ನು ಹಿಂಪಡೆದು, ಮೊದಲಿದ್ದ ದರಕ್ಕೆ (42) 4 ಹೆಚ್ಚಿಸಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!