ಉದಯವಾಹಿನಿ, ಮುಂಬೈ: ಚಲಿಸುತ್ತಿರುವ ರೈಲಿನಲ್ಲಿ ಪತ್ನಿಯ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಳ್ಳಲು ಬಂದ ದರೋಡೆಕೋರನಿಂದ ತನ್ನ ಪತ್ನಿಯನ್ನು ರಕ್ಷಿಸುವ ಭರದಲ್ಲಿ ಪತಿಯೊರ್ವ ತನ್ನ ಒಂದು ಕೈಯನ್ನೇ ಕಳೆದುಕೊಂಡಿರುವ ಆಘಾತಕಾರಿ ಘಟನೆ ಮುಂಬೈಯಲ್ಲಿ ಸಂಭವಿಸಿದೆ.
ಪನ್ವೇಲ್ ನಲ್ಲಿ ವೈದ್ಯರಾಗಿರುವ ಯೋಗೇಶ್ ದೇಶುಖ್ (50) ಮತ್ತು ಅವರ ಪತ್ನಿ ದೀಪಾಲಿ ದೇಶುಖ್ (44) ಇಬ್ಬರೂ ತಮ್ಮ ಮಗಳೊಂದಿಗೆ ಸಂಬಂಧಿಕರ ಮನೆಗೆ ಹೋಗಲು ಬುಧವಾರ ಬೆಳಗಿನ ಜಾವ 3.35 ರ ಸುಮಾರಿಗೆ ಲೋಕಮಾನ್ಯ ತಿಲಕ್ ಟರ್ಮಿನಸ್ (ಕುರ್ಲಾ) ನಿಂದ ನಾಂದೇಡ್ ಎಕ್ಸ್‌ಪ್ರೆಸ್ ರೈಲನ್ನು ಹತ್ತಿದ್ದಾರೆ, ಈ ವೇಳೆ ಪತ್ನಿ ಮತ್ತು ಮಗಳು ಕೆಳಗಿನ ಬರ್ತ್ ನಲ್ಲಿ ಮಲಗಿದ್ದರೆ ಪತಿ ಮೇಲಿನ ಬರ್ತ್ ನಲ್ಲಿ ಮಲಗಿದ್ದರು, ರೈಲು ನಿಲ್ದಾಣದಿಂದ ರೈಲು ಹೊರಟು ಸುಮಾರು ಹದಿನೈದು ನಿಮಿಷಗಳು ಆಗುವಷ್ಟರಲ್ಲಿ ಓರ್ವ ಕಳ್ಳ ಇವರ ಬಳಿ ಬಂದು ದೀಪಾಲಿ ಅವರ ಕೈಯಲ್ಲಿದ್ದ ಬ್ಯಾಗ್ ಎಳೆಯಲು ಯತ್ನಿಸಿದ್ದಾನೆ ಆದರೆ ದೀಪಾಲಿ ಮಾತ್ರ ತನ್ನ ಕೈಯಲ್ಲಿದ್ದ ಬ್ಯಾಗ್ ಬಿಡಲಿಲ್ಲ ಈ ವೇಳೆ ಇಬ್ಬರ ನಡುವೆ ಹೊಯ್ ಕೈ ನಡೆದು ಕಳ್ಳ ಮಹಿಳೆಯನ್ನು ಬ್ಯಾಗ್ ಸಮೇತ ಬೋಗಿಯ ಬಾಗಿಲು ತನಕ ಎಳೆದುಕೊಂಡು ಹೋಗಿದ್ದಾನೆ ಆದರೂ ಮಹಿಳೆ ಮಾತ್ರ ಬ್ಯಾಗ್ ಬಿಡಲಿಲ್ಲ ಈ ವೇಳೆ ಪತಿ, ಪತ್ನಿಯ ರಕ್ಷಣೆಗೆ ಮುಂದಾಗಿದ್ದಾರೆ ಅಷ್ಟರಲ್ಲೇ ಕಳ್ಳ ಮಹಿಳೆಯ ಕೈಯಲ್ಲಿದ್ದ ಬ್ಯಾಗ್ ಎಳೆದು ರೈಲಿನಿಂದ ಹೊರ ಜಿಗಿದಿದ್ದಾನೆ ಬ್ಯಾಗ್ ಎಳೆಯುವ ಭರದಲ್ಲಿ ಮಹಿಳೆ ಕೂಡ ರೈಲಿನಿಂದ ಹೊರ ಎಸೆಯಲ್ಪಟ್ಟಿದ್ದಾರೆ ಇದನ್ನು ನೋಡಿದ ಪತಿ, ಪತ್ನಿಯನ್ನು ರಕ್ಷಿಸಲು ಹೋಗಿ ರೈಲಿನಿಂದ ಹೊರ ಬಿದ್ದಿದ್ದಾರೆ.
