
ಉದಯವಾಹಿನಿ, ಮಂಡ್ಯ: ಪಹಲ್ಗಾಮ್ ಭಯೋತ್ಪಾದಕ ದಾಳಿಗೂ ಕಾಲ್ತುಳಿತ ಪ್ರಕರಣಕ್ಕೂ ಏನು ಸಂಬಂಧ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಎಷ್ಟು ಅಟ್ಯಾಕ್ ಆಗುದ್ದೋ, ಆಗ ಅವರು ರಾಜೀನಾಮೆ ಕೊಟ್ರಾ…? ಅಂತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಮಂಡ್ಯ ಮೈಶುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿಂದು ಪಾಲ್ಗೊಂಡಿದ್ದ ಸಚಿವರು, ಶಾಲಾ ಆವರಣದಲ್ಲಿ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಆರೋಗ್ಯ ಇನ್ನೂ ಪಿಕಪ್ ಆಗಬೇಕು. ಆದ್ರೆ ಎಲ್ಲಾ ಕಡೆ ಬರಲೇಬೇಕು ಹೀಗಾಗಿ ಬರ್ತಾ ಇದ್ದೀನಿ. ಕಾಲ್ತುಳಿತದ ವಿಚಾರದಲ್ಲಿ ಸರ್ಕಾರ ಗಂಟೆಗೊಂದು ತೀರ್ಮಾನ ಮಾಡ್ತಾ ಇದೆ. ಅಂತಿಮವಾಗಿ ಇವರು ಏನು ಮಾಡ್ತಾರೆ ನೋಡಬೇಕು. ಮೊದಲು ಇರುವ ನ್ಯಾಯಾಂಗ ತನಿಖೆ ಅಂದ್ರು. ಈಗ ಸಿಐಡಿ ತನಿಖೆ ಅಂತಾ ಇದ್ದಾರೆ. ಅಂತಿಮವಾಗಿ ತನಿಖಾ ವರದಿ ಪಡೆದುಕೊಳ್ಳುತ್ತಾರೆ. ಇದೊಂದು ಸರ್ಕಾರ ಅನ್ನೋಕೆ ಆಗುತ್ತಾ…? ಯಾವುದೇ ತೀರ್ಮಾನ ಮಾಡಿದ್ರೆ ಸ್ಪಷ್ಟತೆ ಇರಬೇಕು. ಅಧಿಕಾರಿಗಳ ತಪ್ಪು ಏನಿತ್ತು…? ಎಫ್‌ಐಆರ್‌ನಲ್ಲಿ ಅಧಿಕಾರಿಗಳು ಕರ್ತವ್ಯ ಲೋಪ ಆಗಿಲ್ಲ ಅಂತಾ ಇದೆ. ಒಟ್ಟಿನಲ್ಲಿ ಸರ್ಕಾರ ಸಂಪೂರ್ಣ ವೈಫಲ್ಯ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಪಹಲ್ಗಾಮ್, ಪ್ರಯಾಗ್‌ರಾಜ್‌ನಲ್ಲಿ ತೊಂದ್ರೆ ಆದ್ರೆ ರಾಷ್ಟ್ರೀಯ ನಾಯಕರು ಕೇಳಬೇಕು ಅಲ್ವಾ. ಆ ಬಗ್ಗೆ ರಾಷ್ಟ್ರ ನಾಯಕರು ಹೋರಾಟ ಮಾಡಬೇಕು. ಇಲ್ಲಿ ಇವರು ಮಾಡಿರೋ ತಪ್ಪಿಗೆ ಪೆಹಲ್ಗಾಮ್, ಪ್ರಯಾಗ್‌ರಾಜ್ ಘಟನೆ ಮಧ್ಯೆ ತರ್ತಿದ್ದಾರೆ. ಪೆಹಲ್ಗಾಮ್ ಘಟನೆಗೂ ಇಲ್ಲಿಗೂ ಏನು ಸಂಬಂಧ? ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗೆ ಎಷ್ಟು ಅಟ್ಯಾಕ್ ಆಗುದ್ವು…? ಆಗ ಅವರು ರಾಜೀನಾಮೆ ಕೊಟ್ರಾ? ಬೆಂಗಳೂರಿನಲ್ಲಿ ಇವರ ವರ್ಚಸ್‌ಗಾಗಿ ಘಟನೆ ನಡೆದಿರೋದು ಎಂದು ತಿವಿದರು.
