ಉದಯವಾಹಿನಿ, ವಾಷಿಂಗ್ಟನ್: ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಬಲಿಯಾದ ಉಗ್ರರ ಅಂತ್ಯಕ್ರಿಯೆ ನೇತೃತ್ವ ವಹಿಸಿದ್ದ ಎಲ್‍ಇಟಿ ಕಮಾಂಡರ್ ಹಫೀಜ್ ಅಬ್ದುರ್ ರೌಫ್ ಭಯೋತ್ಪಾದಕ ಅಲ್ಲ. ಆತ ಸ್ಥಳೀಯ ಧರ್ಮಗುರು ಅಂತ ಪಾಕ್ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಹೇಳಿದ್ದಾನೆ.
ವಿಶ್ವಸಂಸ್ಥೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜಾಗತಿಕ ಉಗ್ರನೆಂದು ಘೋಷಿಸಿರುವುದರಲ್ಲಿ ಈತನ ಹೆಸರು ಇದೆ. ಆದರೆ ಆತ ಭಯೋತ್ಪಾದಕನಲ್ಲ. ಭಾರತ ಕೂಡ ತಪ್ಪು ಫೋಟೋ ಹಂಚಿಕೊಂಡಿದೆ. ಭಯೋತ್ಪಾದನೆ ನಿಗ್ರಹಕ್ಕೆ ಈಗಲೂ ಭಾರತಕ್ಕೆ ಪಾಕ್ ಸಹಕಾರ ನೀಡಲಿದೆ. ಭಾರತ ರಾಯಭಾರ ಸಂಸ್ಥೆಯು ಐಎಸ್‍ಐ ಜೊತೆ ಕೂತು ಚರ್ಚಿಸಿ ಕಾರ್ಯ ನಿರ್ವಹಿಸಿದರೆ 2 ದೇಶಗಳಲ್ಲಿನ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬಹುದು ಎಂದಿದ್ದಾನೆ.
