ಉದಯವಾಹಿನಿ, ಹಾಸನ: ಈ ಥರ ಪರಿಸ್ಥಿತಿ ಯಾವ ತಂದೆ ತಾಯಿಗೂ ಬರಬಾರದು.. ಇದೇ ಜಾಗದಲ್ಲಿ ನನ್ನ ಮಗನನ್ನ ಮಲಗಿಸಿದ್ದೇನೆ… ನನ್ನ ಮಗನಿಗೋಸ್ಕರವೇ ಈ ಜಾಗ ಮಾಡಿದ್ದು, ಈಗ ಇಲ್ಲೇ ಮಲಗಿಸಿದ್ದೀನಿ.. ಯಾರಿಗೂ ಈ ಪರಿಸ್ಥಿತಿ ಬೇಡ… ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ ಆರ್‌ಸಿಬಿ ಅಭಿಮಾನಿ ಭೂಮಿಕ್ ತಂದೆಯ ಆಕ್ರಂದನ ನುಡಿಗಳಿವು…ಹೌದು. ಘಟನೆ ನಡೆದು ಮೂರು ದಿನ ಕಳೆದಿದೆ. ಆದ್ರೆ ಹೆತ್ತವರ ಆಕ್ರಂತಕ ಕಿಂಚಿತ್ತೂ ಕಡಿಮೆಯಾಗಿಲ್ಲ. ಮಕ್ಕಳನ್ನು ನೆನೆದು ಗೋಳಿಡುತ್ತಲೇ ಇದ್ದಾರೆ. ಅದೇ ರೀತಿ ಮೃತ ಎಂಜಿನಿಯರಿಂಗ್ ವಿದ್ಯಾರ್ಥಿ ಭೂಮಿಕ್ ತಂದೆ ಬೇಲೂರು ತಾಲ್ಲೂಕಿನ ಕುಪ್ಪಗೋಡು ಗ್ರಾಮದ ಡಿ.ಟಿ ಲಕ್ಷ್ಮಣ್ ಮಗನ ಸಮಾಧಿ ಮೇಲೆ ಮಲಗಿ ಗೋಳಾಡಿದ್ದಾರೆ.
ಈ ಥರ ಪರಿಸ್ಥಿತಿ ಬೇರೆ ಯಾವ ತಂದೆ ತಾಯಿಗೂ ಬರಬಾರದು… ನನ್ನ ಮಗನನ್ನ ಇಲ್ಲೇ ಮಲಗಿಸಿದ್ದೀನಿ… ನನ್ನ ಮಗನ ಜೊತೆ ಮಲಗ್ತೀನಿ… ನನ್ನ ಮಗನ ಜೊತೆ ಮಲಗ್ತೀನಿ… ನನ್ನ ಮಗ ಇನ್ನೂ ಮಲಗಿದ್ದಾನೆ… ಯರ‍್ಯಾರ್ ಬ್ಯಾಡ್ ಕಾಮೆಂಟ್ ಮಾಡೀರಾ ಅರ್ಥ ಮಾಡ್ಕೊಳ್ಳಿ ಅವರ ತಂದೆ ಪರಿಸ್ಥಿತಿ ಅಂತ ಕಣ್ಣೀರಿಟ್ಟಿದ್ದಾರೆ. ಈ ದೃಶ್ಯ ಕಠುಕರಿಗೂ ಕಣ್ಣೀರು ತರಿಸುವಂತಿದೆ.
