
ಉದಯವಾಹಿನಿ, ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ಅವರಿಂದು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಭಿನ್ನ ಕ್ಷೇತ್ರದ ಜನಪ್ರಿಯ ವ್ಯಕ್ತಿಗಳು, ಮದುವೆ ಎಂಬ ಪವಿತ್ರ ಬಂಧನದಲ್ಲಿ ಒಂದಾಗುತ್ತಿರುವುದು ವಿಶೇಷ.
ಲಕ್ನೋದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಿಂಕು ಸಿಂಗ್, ಮಚ್ಲಿಶಹರ್ ಕ್ಷೇತ್ರ ಪ್ರತಿನಿಧಿಸುವ ಕಿರಿಯ ಸಂಸದರಲ್ಲಿ ಒಬ್ಬರಾದ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲೂ ಫೋಟೋಗಳು ಹರಿದಾಡುತ್ತಿವೆ. ಅದ್ಧೂರಿ ಸಮಾರಂಭದಲ್ಲಿ ಕುಟುಂಬಸ್ಥರು ಮಾತ್ರವಲ್ಲದೇ ಖ್ಯಾತ ಕ್ರಿಕೆಟ್ ತಾರೆಯರು, ಕೆಕೆಆರ್ ಫ್ರಾಂಚೈಸಿಯ ಸಹ ಆಟಗಾರರು ಹಾಗೂ ಹಿರಿಯ ರಾಜಕೀಯ ನಾಯಕರೂ ಪಾಲ್ಗೊಳ್ಳಲಿದ್ದಾರೆ.
