ಉದಯವಾಹಿನಿ, ಇಸ್ಲಾಮಾಬಾದ್: ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತದ ಅಸ್ತ್ರಗಳನ್ನು ಭೇದಿಸಲು ವಿಫಲವಾದ ಪಾಕಿಸ್ತಾನ ಇದೀಗ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಗಾಗಿ ಅಮೆರಿಕದ ಬಳಿ ಬೇಡಿಕೊಂಡಿದೆ. ಹೌದು. ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತವು ಪಾಕಿಸ್ತಾನದ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ 9 ಉಗ್ರರ ಅಡಗು ತಾಣಗಳನ್ನು ಧ್ವಂಸಗೊಳಿಸಿತು. ಅಲ್ಲದೇ ಪಾಕ್ ದಾಳಿಗೆ ಪ್ರತೀಕಾರವಾಗಿ 11 ವಾಯುನೆಲೆಗಳನ್ನೂ ಧ್ವಂಸಗೊಳಿಸಿತ್ತು. ಇದಕ್ಕೂ ಮುನ್ನ ಪಾಕ್ ಭಾರತದ ಮೇಲೆ ನಡೆಸಿದ ದಾಳಿಗಳನ್ನೆಲ್ಲ ಎಸ್-400 ವಾಯುರಕ್ಷಣಾ ವ್ಯವಸ್ಥೆ ವಿಫಲಗೊಳಿಸಿತು. ಒಟ್ಟಿನಲ್ಲಿ ಭಾರತದ ಎದುರು ಮಂಡಿಯೂರಿದ ಪಾಕ್ ಕಾಡಿ ಬೇಡಿ ಕದನ ವಿರಾಮ ಮಾಡಿಕೊಂಡಿತು. ಭಾರತದ ಈ ಪರಾಕ್ರಮ ಕಂಡು ದಂಗಾಗಿರುವ ಪಾಕಿಸ್ತಾನ ಈಗ ತನಗೂ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆ ಮತ್ತು ಫೈಟರ್ ಜೆಟ್‌ಗಳನ್ನು ಕಲ್ಪಿಸುವಂತೆ ಅಮೆರಿಕದ ಬಳಿ ಬೇಡಿಕೊಂಡಿದೆ.
