ಉದಯವಾಹಿನಿ, ಲಕ್ಷ್ಮೀಶ್ವರ: ಪಟ್ಟಣದ ಭರಮದೇವರ ಸರ್ಕಲ್‌ನಿಂದ ದೂದಪೀರಾಂ ದರ್ಗಾ ರಸ್ತೆ ನಿರ್ಮಾಣ ಕಾಮಗಾರಿಗೆ ಗುತ್ತಿಗೆದಾರರು ಹೊಸ ರಸ್ತೆ ನಿರ್ಮಿಸಲು ಸ್ಥಳಕ್ಕೆ ಆಗಮಿಸಿ ಜೆಸಿಬಿಯಿಂದ ರಸ್ತೆ ಅಗೆಯುವ ಕಾರ್ಯ ಪ್ರಾರಂಭಿಸಿದ್ದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ಅರ್ಧಕ್ಕೆ ನಿಂತಿರುವ ಚಾವಡಿಯಿಂದ ಭರಮದೇವರ ಸರ್ಕಲ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿದ ನಂತರ ಹೊಸ ರಸ್ತೆ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ನಂತರ ಗುತ್ತಿಗೆದಾರರು ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದರು.
