ಉದಯವಾಹಿನಿ, ಪ್ಯಾರಿಸ್: ಜಮು ಮತ್ತು ಕಾಶೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ನರಮೇಧಕ್ಕೆ ಪ್ರತೀಕಾರವಾಗಿ ಭಾರತ-ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದ (ಆಪರೇಷನ್ ಸಿಂಧೂರ) ವೇಳೆ ರಫೇಲ್ ಯುದ್ಧ ವಿಮಾನಗಳ ಕಾರ್ಯಕ್ಷಮತೆ ಬಗ್ಗೆ ಚೀನಾ ಅಪಪ್ರಚಾರ ನಡೆಸಿತ್ತು ಎಂದು ಫ್ರಾನ್ಸ್ ಆರೋಪಿಸಿದೆ. ತನ್ನ ರಾಯಭಾರ ಕಚೇರಿಗಳ ಮೂಲಕ, ಫ್ರಾನ್ಸ್ ನ ರಫೇಲ್ ಜೆಟ್‌ಗಳ ಜಾಗತಿಕ ಖ್ಯಾತಿಗೆ ಹಾನಿ ಮಾಡಲು ಚೀನಾ ಪ್ರಯತ್ನಿಸಿತು. ಫ್ರೆಂಚ್ ಗುಪ್ತಚರ ವರದಿಯ ಪ್ರಕಾರ, ಆಪರೇಷನ್ ಸಿಂಧೂರ್ ನಂತರ, ಚೀನಾ ರಫೇಲ್ ಜೆಟ್‌ಗಳ ಮಾರಾಟದ ಮೇಲೆ ಪ್ರಭಾವ ಬೀರಲು ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿತ್ತು. ತನ್ನ ರಾಯಭಾರ ಕಚೇರಿಗಳ ಮೂಲಕ, ಫ್ರಾನ್‌್ಸನಿಂದ ಈ ಜೆಟ್‌ಗಳನ್ನು ಆರ್ಡರ್ ಮಾಡಿದ ದೇಶಗಳು ರಫೇಲ್ ಖರೀದಿಸುವುದನ್ನು ತಡೆಯಲು ಚೀನಾ ಪ್ರಯತ್ನಿಸಿತ್ತು ಮತ್ತು ಬದಲಿಗೆ ಚೀನಾ ನಿರ್ಮಿತ ಜೆಟ್‌ಗಳನ್ನು ಖರೀದಿಸುವಂತೆ ಒತ್ತಾಯಿಸಿತ್ತು.
ಫ್ರೆಂಚ್ ಗುಪ್ತಚರ ವರದಿಯ ಪ್ರಕಾರ, ಭಾರತೀಯ ಸೇನೆಯು ಬಳಸುತ್ತಿ ರುವ ರಫೇಲ್ ವಿಮಾನಗಳು ಪರಿಣಾಮಕಾರಿಯಾಗಿಲ್ಲ ಎಂದು ಚೀನಾ ರಾಯಭಾರ ಕಚೇರಿಯ ರಕ್ಷಣಾ ಅಟ್ಯಾಚ್ ವಾದಿಸಿದ್ದರು. ಅವರು ಇತರ ದೇಶಗಳ ರಕ್ಷಣಾ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಚೀನಾ ನಿರ್ಮಿತ ಶಸಾ್ತ್ರಸ್ತ್ರಗಳ ಬಳಕೆಯನ್ನು ಉತ್ತೇಜಿಸಿದ್ದರು.
