ಉದಯವಾಹಿನಿ, ಸುಪೌಲ್: ಬಿಹಾರದಲ್ಲಿ ಸಚಿವ ನೀರಜ್ ಕುಮಾರ್ ಬಬ್ಲು ಅವರ ಕಾರ್ಯಕ್ರಮದಲ್ಲಿ ಜಿಲ್ಲಾ ಮೀನುಗಾರಿಕೆ ಅಧಿಕಾರಿ ಶಂಭು ಕುಮಾರ್ ಕುಡಿದು ಬಂದು ವೇದಿಕೆ ಹತ್ತಿದ್ದು ಗೊಂದಲಕ್ಕೆ ಕಾರಣವಾಗಿದೆ. ಮದ್ಯಪಾನ ಮಾಡಿರುವ ಶಂಕೆಯ ಮೇರೆಗೆ ಜಿಲ್ಲಾಧಿಕಾರಿ ಸಾವನ್ ಕುಮಾರ್ ಪರೀಕ್ಷೆಗೆ ಆದೇಶಿಸಿದಾಗ, 10 ಮಿಲಿಗ್ರಾಂ ಆಲ್ಕೊಹಾಲ್ ಪತ್ತೆಯಾಗಿದೆ. ತಕ್ಷಣ ಶಂಭು ಕುಮಾರ್‌ರನ್ನು ಬಂಧಿಸಲಾಗಿದ್ದು, ಶಿಸ್ತು ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಸುಪೌಲ್‌ನ ಟೌನ್‌ಹಾಲ್‌ನಲ್ಲಿ ಪ್ರಾಣಿ ಮತ್ತು ಮೀನುಗಾರಿಕೆ ಸಂಪನ್ಮೂಲ ಇಲಾಖೆಯಿಂದ ಮೀನುಗಾರರ ದಿನಾಚರಣೆಗಾಗಿ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಚಿವ ನೀರಜ್ ಸಿಂಗ್ ಬಬ್ಲು ಭಾಗವಹಿಸಿದ್ದರು. ಈ ವೇಳೆ ವೇದಿಕೆಯಲ್ಲಿ ಶಂಭು ಕುಮಾರ್ ಅವರ ವರ್ತನೆಯನ್ನು ಗಮನಿಸಿದ ಜಿಲ್ಲಾಧಿಕಾರಿ, ಆತನಿಂದ ಆಲ್ಕೊಹಾಲ್ ವಾಸನೆ ಬರುತ್ತಿರುವುದನ್ನು ಕಂಡು ತಕ್ಷಣ ಕ್ರಮಕೈಗೊಂಡರು.
ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾರ್ಯಕ್ರಮದ ಬಳಿಕ ಶಂಭು ಕುಮಾರ್‌ರನ್ನು ಸರ್ಕ್ಯೂಟ್ ಹೌಸ್‌ಗೆ ಕರೆಸಲಾಯಿತು. ಎಕ್ಸೈಸ್ ಇಲಾಖೆಗೆ ಮಾಹಿತಿ ನೀಡಿ, ಶ್ವಾಸ ವಿಶ್ಲೇಷಣೆಗೆ ಒಳಪಡಿಸಲಾಯಿತು. ಪರೀಕ್ಷೆಯಲ್ಲಿ ಆಲ್ಕೊಹಾಲ್ ಸೇವನೆ ದೃಢಪಟ್ಟಿತು. ಶಂಭು ಕುಮಾರ್‌ನನ್ನು ತಕ್ಷಣ ಬಂಧಿಸಿ, ಎಫ್‌ಐಆರ್ ದಾಖಲಿಸಲಾಯಿತು.
