ಉದಯವಾಹಿನಿ, ದೇವಗಢ, ಜಾರ್ಖಂಡ್​: ಜಾರ್ಖಂಡ್‌ನ ದೇವಭೂಮಿ ದೇವಗಢ ಇಡೀ ದೇಶದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು ಎಂದು ಪ್ರಸಿದ್ಧಿ ಪಡೆದಿದೆ. ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಅತ್ಯಂತ ವಿಶೇಷ ಮತ್ತು ಪ್ರಮುಖವಾದ ಜ್ಯೋತಿರ್ಲಿಂಗವನ್ನು ದೇವಗಢದ ಬೈಜನಾಥ್ ಧಾಮ ಎಂದು ಕರೆಯಲಾಗುತ್ತದೆ. ಏಕೆಂದರೆ ಇಲ್ಲಿ ಜ್ಯೋತಿರ್ಲಿಂಗದ ಜೊತೆಗೆ ಮಾತಾ ಸತಿಯೂ ವಾಸಿಸುತ್ತಾಳೆ. ಆದರೆ, ದೇವಗಢ ಬೈದ್ಯನಾಥ ಧಾಮ ದೇವಾಲಯದ ಹೊರತಾಗಿ, ಜಿಲ್ಲೆಯಲ್ಲಿ ಅಂತಹ ಅನೇಕ ದೇವಾಲಯಗಳಿವೆ. ಇವು ಪೌರಾಣಿಕ ಇತಿಹಾಸವನ್ನು ಹೊಂದಿವೆ ಮತ್ತು ದೂರದ ಜಿಲ್ಲೆಗಳಿಂದಲೂ ಜನರು ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಶಿವನ ಕೃಪೆಗೆ ಪಾತ್ರರಾಗುತ್ತಾರೆ.
ಇಲ್ಲಿದೆ ನಿಗೂಢ ದೇವಾಲಯ: ವಿಶೇಷ ಆಕರ್ಷಣೆಯ ದೇವಾಲಯವೆಂದರೆ ದೇವಗಢದ ಸೋನರಥಧಿ ಬ್ಲಾಕ್‌ನ ಖೋಪ್ಚುವಾ ಪಂಚಾಯತ್‌ನ ಪಾವೆ ಗ್ರಾಮದಲ್ಲಿರುವ ಪವೇಶ್ವರ ಧಾಮ ದೇವಾಲಯ. ಈ ದೇವಾಲಯದ ಬಗ್ಗೆ ಅನೇಕ ಆಸಕ್ತಿದಾಯಕ ಮತ್ತು ಪೌರಾಣಿಕ ಕಥೆಗಳಿವೆ. ಪವೇಶ್ವರ ಧಾಮ ದೇವಾಲಯವು ಇಲ್ಲಿನ ಜನರಿಗೆ ನಂಬಿಕೆಯ ಕೇಂದ್ರವೂ ಹೌದು.
ದೇವಾಲಯದ ಬಗ್ಗೆ ಅನೇಕ ಆಸಕ್ತಿದಾಯಕ ಕಥೆಗಳಿವೆ: ಈ ದೇವಾಲಯದ ಮಹಿಮೆ ಅಪಾರ ಎಂದು ದೇವಾಲಯದ ಅರ್ಚಕ ಪಂಡಿತ್ ಮೃತ್ಯುಂಜಯ ಝಾ ಹೇಳಿದ್ದಾರೆ. ಈ ದೇವಾಲಯವನ್ನು ಶಿವ ಪುರಾಣದಲ್ಲಿಯೂ ಉಲ್ಲೇಖಿಸಲಾಗಿದೆ ಅಂತಾರೆ ಅವರು. ನಾಲ್ಕು ತಲೆಮಾರುಗಳಿಂದ ಪಂಡಿತ್​ ಮೃತ್ಯುಂಜಯ್​ ಝಾ ಅವರ ಕುಟುಂಬ ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾ ಬಂದಿದೆ. ದೇವಾಲಯವನ್ನು ಪೂಜಿಸುವಾಗ ಎಲ್ಲಾ ಆಚರಣೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ ಅಂತಾರೆ ಅವರು. ಈ ದೇವಾಲಯದ ಬಗ್ಗೆ ಹಲವು ರಹಸ್ಯಗಳಿವೆ, ಪರ್ವತಗಳ ನಡುವೆ ನಿರ್ಮಿಸಲಾದ ಈ ದೇವಾಲಯವು ತನ್ನೊಳಗೆ ಅನೇಕ ರಹಸ್ಯಗಳನ್ನು ಸಂಗ್ರಹಿಸಿದೆ.

Leave a Reply

Your email address will not be published. Required fields are marked *

error: Content is protected !!