ಉದಯವಾಹಿನಿ, ಮುಂಬೈ: ಬೀದಿನಾಯಿಗಳು ರಸ್ತೆಯಲ್ಲಿ ಓಡಾಡುವಂತಹ ವಾಹನಗಳ ಹಿಂದೆ ಬೊಗಳುತ್ತಾ ಓಡಿಬರುವುದನ್ನು ನಾವು ಹಲವು ಬಾರಿ ನೋಡಿರುತ್ತೇವೆ. ಈ ಬೀದಿ ನಾಯಿಗಳ ಈ ಕೃತ್ಯದಿಂದ ಅನೇಕರಿಗೆ ಸಮಸ್ಯೆಯಾಗಿದೆ. ಇದೀಗ ಮುಂಬೈನ ಬೀದಿಯಲ್ಲಿ ಬೀದಿ ನಾಯಿಯೊಂದು ಲ್ಯಾಂಬೋರ್ಘಿನಿ ಕಾರನ್ನೇ ತಡೆದು ನಿಲ್ಲಿಸಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ರಂಜಿಸಿದಲ್ಲದೇ ಅವರ ಕುತೂಹಲವನ್ನು ಕೆರಳಿಸಿದೆ.

ವೈರಲ್ ಆದ ವಿಡಿಯೊದಲ್ಲಿ ಕಿತ್ತಳೆ ಬಣ್ಣದ ಲ್ಯಾಂಬೋರ್ಘಿನಿ ಕಾರು ಬರುವಾಗ ಬೀದಿ ನಾಯಿಯೊಂದು ಅದಕ್ಕೆ ಅಡ್ಡಬಂದು ತಡೆದು ನಿಲ್ಲಿಸುವುದು ಸೆರೆಯಾಗಿದೆ. ಚಾಲಕನು ಇನ್ನೊಂದು ಕಡೆಯಿಂದ ಚಲಿಸಲು ಪ್ರಯತ್ನಿಸುತ್ತಿದ್ದಂತೆ, ನಾಯಿ ಹಿಂಬಾಲಿಸುತ್ತಾ ಮತ್ತೆ ಅಡ್ಡಬಂದು ನಿಂತಿದೆ. ಹಾಗೇ ಅದು ಆ ಕಾರನ್ನು ಕಂಡು ಜೋರಾಗಿ ಬೊಗಳಿದೆ. ಸ್ವಲ್ಪ ಸಮಯದ ನಂತರ, ಲ್ಯಾಂಬೋರ್ಘಿನಿ ವೇಗವನ್ನು ಹೆಚ್ಚಿಸಿ ಹೇಗೋ ನಾಯಿಯಿಂದ ತಪ್ಪಿಸಿಕೊಂಡು ಮುಂದೆ ಸಾಗುತ್ತದೆ. ಆದರೆ ನಾಯಿ ಅದನ್ನು ಬೆನ್ನಟ್ಟಿಕೊಂಡು ಹೋಗಿದೆ. ನಂತರ ಕಾರು ಅದರ ದೃಷ್ಟಿಯಿಂದ ಕಣ್ಮರೆಯಾದಾಗ ಅದು ಸುಮ್ಮನಾಗಿದೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊ ಈಗಾಗಲೇ 1.2 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಮತ್ತು ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.

ನೆಟ್ಟಿಗರೊಬ್ಬರು, “ನಾಯಿಗೆ ಹೆದರಿ ಲ್ಯಾಂಬೋರ್ಘಿನಿ ಓಡಿಹೋಯಿತು” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಬಹುಶಃ ಅದರ ಹಿಂದಿನ ಜನ್ಮದಲ್ಲಿ, ಅದು ಅದೇ ಬಣ್ಣದ ಲ್ಯಾಂಬೋರ್ಘಿನಿ ಯನ್ನು ಹೊಂದಿರಬೇಕು” ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕರು ನಾಯಿಯ ಆತ್ಮವಿಶ್ವಾಸವನ್ನು ಮೆಚ್ಚಿಕೊಂಡರು ಮತ್ತು ಅದನ್ನು “ರಸ್ತೆಯ ನಿಜವಾದ ಬಾಸ್” ಎಂದು ಕರೆದಿದ್ದಾರೆ. ಐಷಾರಾಮಿ ಕಾರುಗಳು ಹೆದ್ದಾರಿಗಳನ್ನು ಆಳಬಹುದು, ಆದರೆ ಬೀದಿ ನಾಯಿಗಳು ಅವುಗಳಿಗೆ ಚಾರ್ಚ್ ಮಾಡುತ್ತವೆ ಎಂದು ಹಲವರು ತಮಾಷೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!