ಉದಯವಾಹಿನಿ, ರಾಯ್‌ಪುರ: ಛತ್ತೀಸ್‌ಗಢದ ಭಿಲಾಯಿಯ ಸುಪೇಲಾ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 17 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಆತ ತನ್ನ ಸ್ನೇಹಿತನೊಂದಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದ. ಈ ವೇಳೆ ಬೀದಿ ನಾಯಿಯೊಂದು ಇದ್ದಕ್ಕಿದ್ದಂತೆ ಅಡ್ಡಬಂದ ಕಾರಣ ಅದನ್ನು ಉಳಿಸಲು ಹೋಗಿ ಸ್ಕೂಟರ್ ತಿರುಗಿಸಿದ್ದ. ಈ ವೇಳೆ ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆ ಪಕ್ಕದಲ್ಲಿರುವ ಚರಂಡಿಗೆ ಬಿದ್ದರು. ಅಪಘಾತದಲ್ಲಿ, ರೌನಕ್ ದ್ವಿವೇದಿ ಎಂಬ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಆತನ ಸ್ನೇಹಿತ ಗಾಯಗೊಂಡಿದ್ದಾನೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಾಹಿತಿ ಪ್ರಕಾರ, ರೌನಕ್ ತನ್ನ ಸ್ನೇಹಿತನೊಂದಿಗೆ ಶ್ರೀರಾಮ್ ಚೌಕ್ ಕಡೆಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ ರೌನಕ್ ತಲೆಗೆ ಗಂಭೀರ ಗಾಯಗಳಾದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆದರೆ ಹಿಂದೆ ಕುಳಿತಿದ್ದ ರೌನಕ್ ಅವನ ಸ್ನೇಹಿತ ಹಾರಿ ಹೋಗಿ ಚರಂಡಿ ಬಳಿ ಬಿದ್ದಿದ್ದರಿಂದ ಸಣ್ಣಪುಟ್ಟ ಗಾಯಗಳಾಗಿವೆ.
