ಉದಯವಾಹಿನಿ, ಮ್ಯಾಂಚೆಸ್ಟರ್: ಕ್ರಿಸ್ ವೋಕ್ಸ್ (Chris Woaks) ಅವರ ಬಿರುಗಾಳಿಯ ಚೆಂಡು ಬ್ಯಾಟ್‌ ಮಾಡುತ್ತಿದ್ದ ಯಶಸ್ವಿ ಜೈಸ್ವಾಲ್‌(Yashasvi Jaiswal) ಅವರ ಬ್ಯಾಟ್ ಅನ್ನು ಮುರಿಯಿತು. ಇದರಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮತ್ತು ತಂಡದ ಸ್ಟಾರ್ ಓಪನರ್ ಯಶಸ್ವಿ ಜೈಸ್ವಾಲ್ ಆಘಾತಕ್ಕೊಳಗಾದರು. ಚೆಂಡು ಬ್ಯಾಟ್‌ನ ಹ್ಯಾಂಡಲ್‌ಗೆ ಬಡಿದು ಅಲ್ಲಿಂದ ಮುರಿದುಹೋಯಿತು. ಇದಾದ ನಂತರ, ಯಶಸ್ವಿ ಜೈಸ್ವಾಲ್ ಆಶ್ಚರ್ಯದಿಂದ ಬ್ಯಾಟ್ ಅನ್ನು ಪರಿಶೀಲಿಸುತ್ತಲೇ ಇದ್ದರು ಮತ್ತು ಸ್ವಲ್ಪ ಸಮಯದ ನಂತರ ಅವರು ಡ್ರೆಸ್ಸಿಂಗ್ ರೂಮ್ ಕಡೆಗೆ ಬೆರಳು ತೋರಿಸಿದರು. ಇದರೊಂದಿಗೆ, ಕರುಣ್ ನಾಯರ್ 3-4 ಬ್ಯಾಟ್‌ಗಳೊಂದಿಗೆ ಮೈದಾನಕ್ಕೆ ಓಡಿ ಬಂದರು. ಇದಾದ ನಂತರ ಯಶಸ್ವಿ ಜೈಸ್ವಾಲ್ ಬ್ಯಾಟ್ ಬದಲಾಯಿಸಿದರು. ನಾಲ್ಕನೇ ಟೆಸ್ಟ್‌ ಪಂದ್ಯದ (IND vs ENG) ಮೊದಲನೇ ದಿನ ಪ್ರಥಮ ಇನಿಂಗ್ಸ್‌ನ 9ನೇ ಓವರ್‌ನ 5ನೇ ಎಸೆತದಲ್ಲಿ ಈ ಘಟನೆ ನಡೆಯಿತು.

ಪಂದ್ಯ ಪ್ರಾರಂಭವಾಗುವ ಮುನ್ನ ಮ್ಯಾಂಚೆಸ್ಟರ್‌ನಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಆದ್ದರಿಂದ ಪಿಚ್‌ ಬೌಲರ್‌ಗಳಿಗೆ ನೆರವು ನೀಡುವ ರೀತಿ ಕಾಣುತ್ತಿತ್ತು. ಈ ಕಾರಣದಿಂದಲೇ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಕಂಡೀಷನ್ಸ್‌ ಅನ್ನು ಚೆನ್ನಾಗಿ ಬಳಿಸಿಕೊಂಡ ಇಂಗ್ಲಿಷ್ ವೇಗಿ ಕ್ರಿಸ್‌ ವೋಕ್ಸ್‌ ಹೊಸ ಚೆಂಡಿನಲ್ಲಿ ಮಾರಕ ದಾಳಿಯನ್ನು ನಡೆಸಿದರು. ಕ್ರಿಸ್‌ ವೋಕ್ಸ್ ಮತ್ತು ಜೋಫ್ರಾ ಆರ್ಚರ್ ಮೊದಲನೇ ಸ್ಪೆಲ್‌ನಲ್ಲಿ ವಿಕೆಟ್‌ ಪಡೆಯದಿದ್ದರೂ ಮಾರಕ ದಾಳಿ ನಡೆಸಿದ್ದರು. ಇದರ ನಡುವೆ ಯಶಸ್ವಿ ಜೈಸ್ವಾಲ್ ಅವರ ಬ್ಯಾಟ್ ಮುರಿಯಿತು.

Leave a Reply

Your email address will not be published. Required fields are marked *

error: Content is protected !!