ಉದಯವಾಹಿನಿ, ನವದೆಹಲಿ: ಜೆನ್ನೋವಾ ಬಯೋಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಒಮಿಕ್ರಾನ್-ನಿರ್ದಿಷ್ಟ ಬೂಸ್ಟರ್ ಲಸಿಕೆಗೆ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ತುರ್ತು ಬಳಕೆಯ ಅಧಿಕಾರವನ್ನು ನೀಡಿದೆ. ಎಂಆರ್‌ಎನ್‌ಎ ಆಧಾರಿತ ಲಸಿಕೆ, ಜೆಮ್ಕೊವಾಕ್-ಒಎಂ ಅನ್ನು ಸ್ಥಳೀಯ ಪ್ಲಾಟ್ಫಾರ್ಮ್ ತಂತ್ರಜ್ಞಾನವನ್ನು ಬಳಸಿಕೊಂಡು ಜೆನ್ನೋವಾ ಬಯೋಫಾರ್ಮಾಸ್ಯುಟಿಕಲ್ಸ್ ಅಭಿವೃದ್ಧಿಪಡಿಸಿದೆ ಮತ್ತು ಮಿಷನ್ ಕೋವಿಡ್ ಸುರಕ್ಷಾ ಅಡಿಯಲ್ಲಿ ಬೆಂಬಲಿಸಲಾಗಿದೆ. ಅಂದಹಾಗೇ ಈ ಹಿಂದೆ ಕೋವಿಡ್ ತೀವ್ರತೆಯ ಸಂದರ್ಭದಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳ ಬಳಕೆಗೆ ಡಿಸಿಜಿಐ ಅನುಮೋದನೆ ನೀಡಿತ್ತು. ಈ ಲಸಿಕೆಯನ್ನು ದೇಶದ ಜನತೆಗೆ ಉಚಿತವಾಗಿ ನೀಡಲಾಗಿತ್ತು. ಹೀಗಾಗಿ ಕೊರೋನಾ ಕಂಟ್ರೋಲ್ ಗೆ ಬಂದು, ಕೋವಿಡ್ ತುರ್ತು ಪರಿಸ್ಥಿತಿಯನ್ನು ಕೂಡ ವಿಶ್ವ ಆರೋಗ್ಯ ಸಂಸ್ಥೆ ಹಿಂತೆಗೆದುಕೊಂಡಿದೆ.
