ಉದಯವಾಹಿನಿ, ಸ್ವದೇಶ್‌ನ ಟ್ರೆಡಿಷನಲ್ ಮಧುರೈ ಕಾಟನ್ ಘರ್ಚೋಲಾ ಸೀರೆಯಲ್ಲಿ ನೀತಾ ಅಂಬಾನಿ ಕಾಣಿಸಿಕೊಂಡಿದ್ದಾರೆ. ಹೌದು, ಮುಂಬಯಿಯ ಇರೋಸ್‌ನಲ್ಲಿರುವ ಸ್ವದೇಶ್ ಫ್ಲಾಗ್‌ಶಿಪ್ ಸ್ಟೋರ್‌ನ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮದಲ್ಲಿ ಕುಟುಂಬದೊಂದಿಗೆ ಭಾಗವಹಿಸಿದ್ದ ನೀತಾ ಅಂಬಾನಿಯವರು ಕುಟುಂಬದ ಇತರೆ ಮಹಿಳೆಯರೊಂದಿಗೆ ಟ್ರೆಡಿಷನಲ್ ಸೀರೆ ಲುಕ್‌ನಲ್ಲಿ ಕಾಣಿಸಿಕೊಂಡರು.
ನೀತಾ ಅಂಬಾನಿಯ ಸೀರೆಯ ವಿಶೇಷತೆ: ಅಂದಹಾಗೆ, ನೀತಾ ಅಂಬಾನಿಯವರು ಉಟ್ಟಿದ್ದ ಸೀರೆ ಸಾಮಾನ್ಯ ಸೀರೆಯಲ್ಲ! ಈ ಸೀರೆ ದಕ್ಷಿಣ ಭಾರತದ ಜನಪ್ರಿಯ ಸೀರೆಗಳಲ್ಲಿ ಒಂದಾಗಿರುವ ಮಧುರೈ ಕಾಟನ್ ಘರ್ಚೋಲಾ ಸೀರೆ ಕೆಟಗರಿಗೆ ಸೇರಿದೆ. ಸರಿ ಸುಮಾರು 10 ತಿಂಗಳಿಂದ ಈ ಸೀರೆಯನ್ನು ಸಿದ್ಧಪಡಿಸಲಾಗುತ್ತಿತ್ತು. ಸೀರೆ ಸ್ಪೆಷಲಿಸ್ಟ್ ಆದ ಆರ್ಟಿಸಾನ್ ಶ್ರೀ ರಾಜ್‌ಶ್ರಂದರ್ ರಾಜ್‌ಕೋಟ್ ಇದನ್ನು ವಿನ್ಯಾಸಗೊಳಿಸುತ್ತಿದ್ದರು. ಒಟ್ಟಾರೆ, ದಕ್ಷಿಣ ಭಾರತದ ಮೂಲ ವಿನ್ಯಾಸವನ್ನು ಈ ಬೇಬಿ ಪಿಂಕ್ ಕಲರ್‌ನ ಈ ಸೀರೆಯಲ್ಲಿ ಅನಾವರಣಗೊಳಿಸುವ
ಮನೀಶ್ ಮಲ್ಹೋತ್ರಾ ಸ್ಟೈಲಿಂಗ್: ಈ ಸೀರೆಯ ಸ್ಟೈಲಿಂಗ್‌ಗೆ ಸಾಥ್ ನೀಡರುವುದು ಸೆಲೆಬ್ರೆಟಿ ಡಿಸೈನರ್ ಮನೀಶ್ ಮಲ್ಹೋತ್ರಾ. ಅವರೇ ವಿವರಿಸಿರುವಂತೆ, ಈ ಸೀರೆಯನ್ನು ನೀತಾ ಅಂಬಾನಿಯವರ ಅಭಿಲಾಷೆಯಂತೆಯೇ ಡಿಸೈನ್ ಮಾಡಲಾಗಿದೆಯಂತೆ. ಇನ್ನು, ಈ ಹ್ಯಾಂಡ್‌ಮೇಡ್ ಎಕ್ಸ್‌ಕ್ಲೂಸಿವ್ ಸೀರೆಗೆ ನೀತಾ ಅಂಬಾನಿಯವರು ಡಿಸ್ಟಂಪರ್ ನೀಲಿ ವರ್ಣದ ಮಧುಬಾಲಾ ಡಿಸೈನ್‌ನ ಟ್ರೆಂಡಿ ಡಿಸೈನರ್ ಬ್ಲೌಸ್ ಮ್ಯಾಚ್ ಮಾಡಿದ್ದು, ತಲಾತಲಾಂತರದಿಂದ ಕೊಡುಗೆಯಾಗಿ ದೊರೆತ ಬಂಗಾರದ ಬಾಜುಬಂಧ್ ಇದರೊಂದಿಗೆ ಧರಿಸಿದ್ದಾರೆ. ಜತೆಗೆ ಸಿಂಪಲ್ ಬನ್ ಹೇರ್‌ಸ್ಟೈಲ್ ಅವರನ್ನು ಮತ್ತಷ್ಟು ಆಕರ್ಷಕವಾಗಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
