ಉದಯವಾಹಿನಿ, ದೇಹದ ಆರೋಗ್ಯಕ್ಕೆ ತರಕಾರಿ ಹಾಗೂ ಹಣ್ಣುಗಳು ಮಾತ್ರ ಸಾಕೇ..?. ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಸೇಥಿ ಅವರು ಯಕೃತ್ತು ಹಾಗೂ ಕರುಳಿನ ಆರೋಗ್ಯದ ಜೊತೆಗೆ ಒಟ್ಟಾರೆ ಆರೋಗ್ಯ ಬೆಂಬಲಿಸುವ ರುಚಿಕರವಾದ ಕೆಲವು ಆಹಾರಗಳನ್ನು ಇಲ್ಲಿ ವಿವರಿಸಿದ್ದಾರೆ.ವಾಲ್ನಟ್ಸ್ ಹಾಗೂ ಖರ್ಜೂರ: ವಾಲ್ನಟ್ಸ್ ಹಾಗೂ ಖರ್ಜೂರಗಳನ್ನು ಒಟ್ಟಿಗೆ ತಿನ್ನುವುದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯಕ. ಖರ್ಜೂರವು ಕರಗುವ ನಾರುಗಳಿಂದ ಸಮೃದ್ಧವಾಗಿದೆ. ಇದು ಕರುಳನ್ನು ಶುದ್ಧೀಕರಿಸಲು ಹಾಗೂ ಆರೋಗ್ಯಕರ ಬ್ಯಾಕ್ಟೀರಿಯಾ ಬೆಳೆಯಲು ಸಹಾಯವಾಗುತ್ತದೆ. ವಾಲ್ನಟ್ಸ್ ಉರಿಯೂತದ ಗುಣಲಕ್ಷಣಗಳು ಹಾಗೂ ಒಮೆಗಾ – 3 ಕೊಬ್ಬಿನಾಮ್ಲಗಳ ಸಮೃದ್ಧ ಮೂಲ. ಈ ಎರಡನ್ನೂ ಸಂಯೋಜಿಸಿದಾಗ ಅವು ಕರುಳಿನ ಒಳಪದರಿನ ಸಮಸ್ಯೆಯನ್ನು ಶಮನಗೊಳಿಸುತ್ತದೆ ಹಾಗೂ ನಿಯಮಿತ ಕರುಳಿನ ಚಲನೆಗೆ ಕಾರಣವಾಗುತ್ತದೆ.

ಡಾರ್ಕ್ ಚಾಕೊಲೇಟ್ ಹಾಗೂ ನಟ್ಸ್: ಬಾದಾಮಿ ಮತ್ತು ಪಿಸ್ತಾದಂತಹ ಬೀಜಗಳು ವಿಟಮಿನ್ ಸಿ ಯಿಂದ ಸಮೃದ್ಧವಾಗಿವೆ. ಡಾರ್ಕ್ ಚಾಕೊಲೇಟ್ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಈ ಎರಡನ್ನೂ ಒಟ್ಟಿಗೆ ತೆಗೆದುಕೊಳ್ಳುವುದು ಹಲವರಿಗೆ ವಿಚಿತ್ರವೆನಿಸಬಹುದು, ಆದರೆ ಅವುಗಳನ್ನು ಒಟ್ಟಿಗೆ ತಿನ್ನುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಡಾ.ಸೇಥಿ ವಿವರಿಸುತ್ತಾರೆ.ಚಾಕೊಲೇಟ್‌ನಲ್ಲಿರುವ ಉತ್ಕರ್ಷಣ ನಿರೋಧಕಗಳು ನಟ್ಸ್​​ಗಳಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಡಾರ್ಕ್ ಚಾಕೊಲೇಟ್‌ನಲ್ಲಿರುವ ಫ್ಲೇವನಾಯ್ಡ್‌ಗಳು ಯಕೃತ್ತನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಶಕ್ತಿಯನ್ನು ಹೆಚ್ಚಿಸುವಲ್ಲಿ ಹಾಗೂ ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುವಲ್ಲಿ ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಯೋಜನಕಾರಿ.ದಾಲ್ಚಿನ್ನಿ, ಸೇಬು, ಜೇನುತುಪ್ಪ: ಸ್ವಲ್ಪ ಜೇನುತುಪ್ಪ ಮತ್ತು ದಾಲ್ಚಿನ್ನಿ ಪುಡಿಯನ್ನು ಕತ್ತರಿಸಿದ ಸೇಬು ಹಣ್ಣಿನ ಮೇಲೆ ಸಿಂಪಡಿಸಿ ಸೇವಿಸಿದರೆ, ಔಷಧೀಯ ಆಹಾರವಾಗಿ ಪರಿವರ್ತಿತವಾಗುತ್ತದೆ. ದಾಲ್ಚಿನ್ನಿಯಲ್ಲಿ ಸಿನ್ನಮಾಲ್ಡಿಹೈಡ್ ಎಂಬ ಸಂಯುಕ್ತವಿದೆ. ಈ ಆಹಾರದ ಸೇವನೆಯಿಂದ ಕರುಳಿನ ಬ್ಯಾಕ್ಟೀರಿಯಾವನ್ನು ಸಮತೋಲನಗೊಳಿಸಲು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ಜೇನುತುಪ್ಪವು ನೈಸರ್ಗಿಕ ಪ್ರಬಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಕರುಳಿನಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ರಕ್ಷಿಸುತ್ತದೆ ಹಾಗೂ ಕರುಳಿನ ಆರೋಗ್ಯ ನಿಯಂತ್ರಿಸುತ್ತದೆ ಎಂದು ವೈದ್ಯರು ತಿಳಿಸುತ್ತಾರೆ. ಮೊಸರು, ಹಣ್ಣುಗಳು: ಮೊಸರು ಪ್ರೋಬಯಾಟಿಕ್‌ಗಳ ಅತ್ಯುತ್ತಮ ಮೂಲ. ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳಿಗೆ ಡೈರಿ ಉತ್ಪನ್ನಗಳು ಮಾತ್ರ ಸಾಕಾಗುವುದಿಲ್ಲ. ಪಾಲಿಫಿನಾಲ್‌ಗಳಲ್ಲಿ ಸಮೃದ್ಧವಾಗಿರುವ ಬ್ಲೂಬೆರ್ರಿಗಳು ಹಾಗೂ ರಾಸ್ಪ್ಬೆರಿಗಳನ್ನು ಮೊಸರಿನೊಂದಿಗೆ ತಿನ್ನಬಹುದು. ಇದರಲ್ಲಿ ಉತ್ತಮ ಬ್ಯಾಕ್ಟೀರಿಯಾ ಉತ್ತೇಜಿಸುತ್ತದೆ. ಇದು ಹೊಟ್ಟೆಯನ್ನು ಶಾಂತಗೊಳಿಸಲು ಹಾಗೂ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಾಯವಾಗುವಂತಹ ಉತ್ತಮ.

Leave a Reply

Your email address will not be published. Required fields are marked *

error: Content is protected !!