ಉದಯವಾಹಿನಿ, ಲಂಡನ್‌: ಭಾರತ ತಂಡವು ಜುಲೈ 2026 ರಲ್ಲಿ ಎಂಟು ಪಂದ್ಯಗಳ ವೈಟ್-ಬಾಲ್ ಸರಣಿಗಾಗಿ ಇಂಗ್ಲೆಂಡ್‌ಗೆ ಹಿಂತಿರುಗಲಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಗುರುವಾರ ದೃಢಪಡಿಸಿದೆ. 2026ರ ಪುರುಷರು ಮತ್ತು ಮಹಿಳೆಯರ ತವರು ವೇಳಾಪಟ್ಟಿಯನ್ನು ಅನಾವರಣಗೊಳಿಸಿದಾಗ ಭಾರತದ ಪ್ರವಾಸವನ್ನು ಖಚಿತಪಡಿಸಿತು.
ನ್ಯೂಜಿಲೆಂಡ್ ವಿರುದ್ಧದ ತವರಿನ ಟೆಸ್ಟ್ ಪಂದ್ಯದ ನಂತರ ಭಾರತೀಯ ಪುರುಷರ ತಂಡವು ಐದು T20I ಮತ್ತು ಮೂರು ODI ಪಂದ್ಯಗಳನ್ನು ಆಡಲಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ಮುಂದಿನ ವರ್ಷ ಜುಲೈ 1, 2026 ರಂದು ಡರ್ಹ್ಯಾಮ್‌ನ ರಿವರ್‌ಸೈಡ್ ಮೈದಾನದಲ್ಲಿ ಟಿ20ಐ ಆಡುವ ಮೂಲಕ ತಮ್ಮ ವೈಟ್-ಬಾಲ್ ಪ್ರವಾಸವನ್ನು ಪ್ರಾರಂಭಿಸಲಿದೆ. ಐದು ಪಂದ್ಯಗಳ ಟಿ20ಐ ಸರಣಿಯು ಮ್ಯಾಂಚೆಸ್ಟರ್, ನಾಟಿಂಗ್‌ಹ್ಯಾಮ್, ಬ್ರಿಸ್ಟಲ್ ಮತ್ತು ಸೌತಾಂಪ್ಟನ್‌ನಲ್ಲಿ ಮುಂದುವರಿಯಲಿದೆ. ನಂತರ ಬರ್ಮಿಂಗ್ಹ್ಯಾಮ್, ಕಾರ್ಡಿಫ್ ಮತ್ತು ಲಂಡನ್‌ನಲ್ಲಿ ಏಕದಿನ ಪಂದ್ಯಗಳು ನಡೆಯಲಿದ್ದು, ಅಂತಿಮ ಪಂದ್ಯ ಜುಲೈ 19 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ.

ಭಾರತದ 2026 ರ ಇಂಗ್ಲೆಂಡ್‌ನ ವೈಟ್-ಬಾಲ್ ಪ್ರವಾಸದ ವೇಳಾಪಟ್ಟಿ
ಮೊದಲ ಟಿ20- ಜುಲೈ 1, ಡರ್ಹಾಮ್ (ರಿವರ್‌ಸೈಡ್)

ಎರಡನೇ ಟಿ20 – ಜುಲೈ 4, ಮ್ಯಾಂಚೆಸ್ಟರ್ (ಓಲ್ಡ್ ಟ್ರಾಫರ್ಡ್)

ಮೂರನೇ ಟಿ20 – ಜುಲೈ 7, ನಾಟಿಂಗ್‌ಹ್ಯಾಮ್ (ಟ್ರೆಂಟ್ ಬ್ರಿಡ್ಜ್)

ನಾಲ್ಕನೇ ಟಿ20- ಜುಲೈ 9, ಬ್ರಿಸ್ಟಲ್ (ಸೀಟ್ ಯೂನಿಕ್ ಕ್ರೀಡಾಂಗಣ)

5ನೇ ಟಿ20 – ಜುಲೈ 11, ಸೌತಾಂಪ್ಟನ್ (ಯುಟಿಲಿಟಾ ಬೌಲ್)

ಏಕದಿನ ಸರಣಿ
ಮೊದಲ ಏಕದಿನ – ಜುಲೈ 14, ಬರ್ಮಿಂಗ್ಹ್ಯಾಮ್ (ಎಡ್ಜ್‌ಬಾಸ್ಟನ್)

ದ್ವಿತೀಯ ಏಕದಿನ – ಜುಲೈ 16, ಕಾರ್ಡಿಫ್ (ಸೋಫಿಯಾ ಗಾರ್ಡನ್ಸ್)

ಮೂರನೇ ಏಕದಿನ – ಜುಲೈ 19, ಲಂಡನ್ (ಲಾರ್ಡ್ಸ್)

Leave a Reply

Your email address will not be published. Required fields are marked *

error: Content is protected !!