ಉದಯವಾಹಿನಿ, ಚೆನ್ನೈ: ಟೀಮ್‌ ಇಂಡಿಯಾದ ಯುವ ಆಲ್‌ರೌಂಡರ್ ವಾಷಿಂಗ್ಟನ್‌ ಸುಂದರ್‌ ಅವರ ತಂದೆ ಎಂ ಸುಂದರ್ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದು, ತಮ್ಮ ಮಗನಿಗೆ ತಂಡದಲ್ಲಿ ಸ್ಥಿರವಾದ ಅವಕಾಶ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್‌ನಲ್ಲಿ ಅಜೇಯ ಶತಕ ಬಾರಿಸಿ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿ ಡ್ರಾಗೊಳಿಸುವಲ್ಲಿ ವಾಷಿಂಗ್ಟನ್‌ ಮಹತ್ವದ ಕೊಡುಗೆ ನೀಡಿದ್ದರು.

‘‘ವಾಷಿಂಗ್ಟನ್‌ ನಿರಂತರವಾಗಿ ಅತ್ಯುತ್ತಮ ನಿರ್ವಹಣೆಯನ್ನು ನೀಡುತ್ತಾ ಬಂದಿದ್ದಾರೆ. ಆದರೆ, ಜನರು ಅದನ್ನು ಮರೆತುಬಿಡುತ್ತಾರೆ. ಇತರ ಆಟಗಾರರು ನಿರಂತರವಾಗಿ ಅವಕಾಶಗಳನ್ನು ಪಡೆಯುತ್ತಾರೆ. ಆದರೆ, ನನ್ನ ಮಗನಿಗೆ ಮಾತ್ರ ಅದು ಸಿಗುತ್ತಿಲ್ಲ. ನಾಲ್ಕನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಮಾಡಿದಂತೆ ವಾಶಿಂಗ್ಟನ್ ಯಾವಾಗಲೂ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಮತ್ತು ನಿರಂತರವಾಗಿ ಐದರಿಂದ 10 ಅವಕಾಶಗಳನ್ನು ಪಡೆಯಬೇಕು. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ನನ್ನ ಮಗನನ್ನು ಆಯ್ಕೆ ಮಾಡದಿರುವುದು ಆಶ್ಚರ್ಯವಾಗಿದೆ. ಆಯ್ಕೆಗಾರರು ನನ್ನ ಮಗನ ನಿರ್ವಹಣೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು’’ ಎಂದು ಎಮ್. ಸುಂದರ್ ಹೇಳಿದ್ದಾರೆ.

2021ರಲ್ಲಿ ವಾಷಿಂಗ್ಟನ್ ಸುಂದರ್ ಟೆಸ್ಟ್ ತಂಡದಿಂದ ಹೊರಬಿದ್ದ ಬಗ್ಗೆಯೂ ಮಾತಾಡಿದ ಎಂ. ಸುಂದರ್, “2021ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ 85 ರನ್, ಅಹಮದಾಬಾದ್‌ನಲ್ಲಿ 96 ರನ್ ಗಳಿಸಿದ್ದರು. ಅದೂ ಕೂಡ ಬ್ಯಾಟಿಂಗ್‌ಗೆ ಸಹಕಾರಿಯಲ್ಲದ ಪಿಚ್‌ಗಳಲ್ಲಿ. ಹೀಗಿದ್ದರೂ ಅವನಿಗೆ ಮುಂದಿನ ಟೆಸ್ಟ್‌ ಸರಣಿಯಲ್ಲಿ ಅವಕಾಶ ನೀಡಲಿಲ್ಲ.ಸೋತರೆ ನನ್ನ ಮಗನನ್ನ ತಂಡದಿಂದ ಕೈಬಿಡುತ್ತಾರೆ. ಇದು ನ್ಯಾಯವಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!