ಉದಯವಾಹಿನಿ, ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ನನಗೆ ಭರವಸೆ ನೀಡಿದ್ದು ನಾನೇ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳದ ) ಅಧ್ಯಕ್ಷನಾಗುತ್ತೇನೆ ಎಂದು ಮಾಲೂರು ಶಾಸಕ ನಂಜೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಎಂಎಫ್ ಅಧ್ಯಕ್ಷ ಸ್ಥಾನದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಎನ್ನುವುದಕ್ಕಿಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಭೀಮಾ ನಾಯಕ್ ಆಯ್ಕೆ ಆಗುವಾಗ ಮುಂದೆ ನನಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು ಎಂದು ತಿಳಿಸಿದರು.
ನನಗೆ ಅನುಭವ ಇದ್ದು, ಕೆಎಂಎಫ್ ಅಧ್ಯಕ್ಷ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದೆ. ಆಗ ನನಗೆ ಮಾತು ನೀಡಿದ್ದರು. ಅಂದು ಮಾತು ಕೊಟ್ಟಂತೆ ನಾನೇ ಅಧ್ಯಕ್ಷ ಆಗುತ್ತೇನೆ ಎಂದರು.
ರಾಘವೇಂದ್ರ ಹಿಟ್ನಾಳ್ ಏನು ನನಗೆ ಅಡ್ಡಿ ಆಗುವುದಿಲ್ಲ. ಇದರಲ್ಲೂ ಹೈಕಮಾಂಡ್ ತೀರ್ಮಾನವೇ ಅಂತಿಮ. ನಂಗೆ ಅವತ್ತು ಮಾತು ಕೊಟ್ಟಿದ್ರು. ಈಗ ಭೀಮಾ ನಾಯಕ್ ಸಮಯ ಮುಗಿದಿದೆ. ಈಗ ನನಗೆ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದರು.
