ಉದಯವಾಹಿನಿ,ಮುಂಬೈ:  ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ‘ಆದಿಪುರುಷ’ ಬಾಕ್ಸ್ ಆಫೀಸ್‌ ಕಲೆಕ್ಷನ್ ಕುಸಿದ ನಂತರ, ಅನಿಮೇಟೆಡ್ ಚಿತ್ರ ‘ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್’ ಭಾರತದ ಚಿತ್ರಮಂದಿರಗಳಲ್ಲಿ ಹೆಚ್ಚಿನ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಬಿಡುಗಡೆಯಾದ ನಾಲ್ಕನೇ ವಾರದಲ್ಲಿ ಚಿತ್ರಮಂದಿರಗಳ ಪ್ರದರ್ಶನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 50 ಕೋಟಿ ರೂ ಕ್ಲಬ್ ಸೇರಿದೆ. ಈ ಚಿತ್ರ ಭಾರತದಲ್ಲಿ ಮೂರು ವಾರಗಳಲ್ಲಿ 50 ಕೋಟಿ ರೂ. ಬಾಚಿದರೆ ಜಾಗತಿಕವಾಗಿ 500 ಮಿಲಿಯನ್ ಡಾಲರ್ ಗಳಿಸಿದೆ. ನಾಲ್ಕನೇ ವಾರದಲ್ಲಿ ಥಿಯೇಟರ್ ಗಳು ಪ್ರದರ್ಶನಗಳನ್ನು ದ್ವಿಗುಣಗೊಳಿಸಿವೆ. IMAX ಮತ್ತು 4DX ಗಳಲ್ಲೂ ಪ್ರದರ್ಶನ ಹೆಚ್ಚಾಗಿದೆ. ಆದಿ ಪುರುಷ ಹಿಂದಿ ವರ್ಸನ್ ಮೊದಲ ದಿನ ರೂ. 37 ಕೋಟಿ ರೂ. ಗಳಿಸಿತ್ತು. ಬಿಡುಗಡೆಯಾದ ಆರನೇ ದಿನದಲ್ಲಿ ಎಲ್ಲಾ ಭಾರತೀಯ ಭಾಷೆಗಳಲ್ಲಿ ಕೇವಲ 7 ಕೋಟಿ ರೂ. ಕಲೆಕ್ಷನ್ ಮಾಡಿದೆ.

Leave a Reply

Your email address will not be published. Required fields are marked *

error: Content is protected !!