ಉದಯವಾಹಿನಿ,ಮಧ್ಯಪ್ರದೇಶ: ರಾಜ್‌ಗಢ ಪ್ರದೇಶದಲ್ಲಿ ಸುಮಾರು 20 ಜನರ ಮೇಲೆ ದಾಳಿ ನಡೆಸಿ ಭಯ ಭೀತಿ ವಾತಾವರಣ ಸೃಷ್ಟಿ ಮಾಡಿದ್ದ, ಕೋತಿಯನ್ನು ಡ್ರೋನ್‌ ಸಹಾಯದಿಂದ ಸೆರೆಹಿಡಿಯಲಾಗಿದೆ. ಕಳೆದ ಹದಿನೈದು ದಿನಗಳಲ್ಲಿ ಕೋತಿ 8 ಜನ ಮಕ್ಕಳು ಸೇರಿದಂತೆ 20 ಜನರ ಮೇಲೆ ದಾಳಿ ನಡೆಸಿತ್ತು. ಈ ಕೋತಿ, ಮನೆ ಛಾವಣಿಗಳು ಮತ್ತು ಕಿಟಕಿಯ ಸರಳುಗಳ ಮೇಲೆ ಕುಳಿತು ಇದ್ದಕ್ಕಿದ್ದಂತೆ ಜನರ ಮೇಲೆ ಹಾರಿ ದಾಳಿ ಮಾಡುತ್ತಿತ್ತು. ನಗರದ ಜನರಲ್ಲಿ ಆತಂಕ ಮನೆ ಮಾಡಿದೆ.

ಕೋತಿಯನ್ನು ಹಿಡಿಯಲು ಪಾಲಿಕೆ ಹಾಗೂ ಆಡಳಿತ ಮಂಡಳಿ ಶತಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ಆದ್ದರಿಂದ, ಪ್ರಯತ್ನಗಳು ವಿಫಲಗೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಅದನ್ನು ಹಿಡಿದು ಕೊಟ್ಟವರಿಗೆ 21 ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ಪುರಸಭೆ ಅಧ್ಯಕ್ಷ ವಿನೋದ್ ಸಾಹು ಘೋಷಣೆ ಮಾಡಿದ್ದರು. ನಿನ್ನೆ ಸಂಜೆ, ಉಜ್ಜಯಿನಿಯಿಂದ ಕರೆಸಲ್ಪಟ್ಟ ರಕ್ಷಣಾ ತಂಡ, ಸ್ಥಳೀಯ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಸೇರಿಕೊಂಡು ಕೋತಿಯನ್ನು ಪತ್ತೆ ಮಾಡಲು ಡ್ರೋನ್ ಬಳಸಿದ ತಂಡ ಈ ಕೋತಿಯನ್ನು ಸೆರೆ ಹಿಡಿದಿದೆ.

Leave a Reply

Your email address will not be published. Required fields are marked *

error: Content is protected !!