ಶ್ರೀ ಕ್ಷೇತ್ರ ಎಂದೇ ಕರೆಯಲ್ಪಡುವ ಶೃಂಗೇರಿಯು ಕರ್ನಾಟಕದ ಅತ್ಯಂತ ಪ್ರಾಚೀನ ಪಟ್ಟಣವಾಗಿದೆ. ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದು, ಒಂದು ಪ್ರಮುಖ ಯಾತ್ರಾ ಕೇಂದ್ರವಾಗಿ ಹೆಸರುವಾಸಿಯಾಗಿದೆ. ಆದಿ ಶಂಕರಾಚಾರ್ಯರು ಈ ಪುಣ್ಯ ಸ್ಥಳದಲ್ಲಿ 12 ವರ್ಷಗಳ ಕಾಲ ನೆಲೆಸಿ ತಮ್ಮ ಶಿಷ್ಯರಿಗೆ ಧರ್ಮದ ಉಪದೇಶವನ್ನು ಮಾಡಿದರು ಎಂದು ನಂಬಲಾಗುತ್ತದೆ.ನೀವು ಶೃಂಗೇರಿಯಲ್ಲಿ ಅನೇಕ ಪವಿತ್ರವಾದ ಆಲಯಗಳನ್ನು ನೋಡಬಹುದು. ಮಕ್ಕಳಿಗೆ ಅಕ್ಷರಾಭ್ಯಾಸಕ್ಕಾಗಿ ಹಾಗು ಶಾರದೆಯನ್ನು ಒಲಿಸಿಕೊಳ್ಳಲು ತಮ್ಮ ಕುಟುಂಬದೊಂದಿಗೆ ಭಕ್ತರು ಇಲ್ಲಿಗೆ ಬರುತ್ತಾರೆ. ಹಾಗೆ ಬಂದವರು ತಪ್ಪದೇ ಇಲ್ಲಿನ 5 ಪ್ರಮುಖ ಆಲಯಗಳಿಗೆ ಭೇಟಿ ನೀಡುತ್ತಾರೆ.
ಶೃಂಗೇರಿ ಮಠವನ್ನು ಕ್ರಿ.ಶ. 8 ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದರು. ಪ್ರಾಚೀನ ಇತಿಹಾಸ ಹೊಂದಿರುವ ಈ ಆಲಯವು ತುಂಗಾ ನದಿಯ ತೀರದಲ್ಲಿದೆ. ಆಲಯವು ತನ್ನದೇ ಆದ ರೋಮಾಂಚಕ ಇತಿಹಾಸ, ಧಾರ್ಮಿಕ ಮಹತ್ವಗಳಿಂದ ಯಾತ್ರಿಕರನ್ನು ಸೆಳೆಯುತ್ತದೆ.
ಈ ದೇವಾಲಯವು ಸರಸ್ವತಿ ಮಾತೆಗೆ ಸಮರ್ಪಿತವಾಗಿದ್ದು, ಶೃಂಗೇರಿ ಶಾರದಾಂಬೆ ಎಂದೇ ಭಕ್ತರು ಕರೆದು ಆಶೀರ್ವಾದ ಬೇಡುತ್ತಾರೆ. ಮಕ್ಕಳಿಗೆ ಅಕ್ಷರಾಭ್ಯಾಸ ಮಾಡುವ ಕೆಲವೇ ಕೆಲವು ದೇವಾಲಯಗಳಲ್ಲಿ ಇದು ಕೂಡ ಒಂದಾಗಿದೆ.
ಶೃಂಗೇರಿಯಿಂದ ನೀವು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ. ಈ ಸ್ಥಳಗಳ ಅಂತರವು ಕೇವಲ 42.2 ಕಿ.ಮೀ ದೂರದಲ್ಲಿದೆ. ಈ ಪ್ರಾಚೀನ ಆಲಯವು ಅನ್ನಪೂರ್ಣ ದೇವಿಗೆ ಅರ್ಪಿತವಾಗಿದೆ ಮತ್ತು ಇದನ್ನು ಅಗಸ್ತ್ಯ ಮಹರ್ಷಿಗಳು ನಿರ್ಮಿಸಿದರು ಎಂಬ ಪ್ರತೀತಿ ಇದೆ.

Leave a Reply

Your email address will not be published. Required fields are marked *

error: Content is protected !!