ಉದಯವಾಹಿನಿ, ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ ರೋಚಕ ತಿರುವ ಸಿಗುವ ಸಾಧ್ಯತೆಯಿದೆ. ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿರುವ ಸಾಕ್ಷಿದಾರನ ಪರವಾಗಿ ಮತ್ತೆ 6 ಜನ ಸ್ಥಳೀಯರು ಮುಂದೆ ಬರುವ ಸಾಧ್ಯತೆಯಿದೆ.ಹೌದು. ದೂರಿನಲ್ಲಿ ದೂರುದಾರ ನಾನೊಬ್ಬನೇ 13 ಜಾಗಗಳಲ್ಲಿ ಹೆಣವನ್ನು ಹೂತಿದ್ದೇನೆ ಎಂದು ತಿಳಿಸಿದ್ದ. ಇಲ್ಲಿಯವರೆಗೆ ಪಾಯಿಂಟ್ ಸಂಖ್ಯೆ 12ರವರೆಗೆ ಶೋಧ ನಡೆದಿದ್ದು 6ನೇ ಪಾಯಿಂಟ್‌ನಲ್ಲಿ ಮಾತ್ರ ಅಸ್ಥಿಪಂಜರ ಸಿಕ್ಕಿದೆ. ಉಳಿದ 12 ಜಾಗದಲ್ಲಿ ಯಾವುದೇ ಅಸ್ಥಿ ಪತ್ತೆಯಾಗಿಲ್ಲ. ದೂರುದಾರನ ಈ ಪ್ರಯತ್ನ ವಿಫಲವಾದ ಬೆನ್ನಲ್ಲೇ ಆತ ಹೆಣ ಹೂತು ಹಾಕಿದ್ದನ್ನು ನೋಡಿದ್ದೇವೆ. ಆತನ ಹುಡುಕಾಟದಲ್ಲಿ ತಾವು ಕೂಡ ಸಹಾಯ ಮಾಡುವುದಾಗಿ 6 ಮಂದಿ ಮುಂದೆ ಬಂದಿದ್ದಾರೆ ಎನ್ನಲಾಗುತ್ತಿದೆ.
6 ಜನ ಬಂದಿರುವ ಬಗ್ಗೆ ವಿಶೇಷ ತನಿಖಾ ತಂಡ (SIT) ಅಧಿಕೃತವಾಗಿ ಇಲ್ಲಿಯವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಈಗ ಈ 6 ಜನರ ಸ್ಥಳೀಯರ ಮಾಡುತ್ತಿರುವ ಆರೋಪದ ಅಸಲಿಯತ್ತಿನ ಬಗ್ಗೆ ಚರ್ಚೆ ಆರಂಭವಾಗಿದೆ.
