ಉದಯವಾಹಿನಿ, ಮಾಸ್ಕೋ: ವೈರಲ್ ಆಗಿರುವ ನಿಕಿ ಮಿನಾಜ್ ಚಾಲೆಂಜ್‌ಗೆ ಪ್ರಯತ್ನಿಸುವಾಗ ರಷ್ಯಾದ ಸಾಮಾಜಿಕ ಮಾಧ್ಯಮ ಪ್ರಭಾವಿಯೊಬ್ಬರು ಅಡುಗೆಮನೆಯ ಕೌಂಟರ್‌ನಿಂದ ಬಿದ್ದು ಬೆನ್ನುಮೂಳೆ ಮುರಿದುಕೊಂಡಿದ್ದಾರೆ. ಕಾಲು ಜಾರಿ ಬಿದ್ದ ಅವರು ತೀವ್ರ ನೋವಿನಿಂದ ಬಳಲಿದ್ದಾರೆ. ವೈರಲ್ ವಿಡಿಯೊದಲ್ಲಿ(Viral Video) ಲಕ್ಷಾಂತರ ಜನರ ಕ‍ಣ್ಣುಗಳನ್ನು ಸೆಳೆದ ಅವರು ರಾತ್ರೋರಾತ್ರಿ ಸಂಚಲನ ಮೂಡಿಸಿದರು.

ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರ ಹೆಸರಿನ ಮೂಲಕ ಕರೆಯಲ್ಪಡುತ್ತಿರುವ ರಷ್ಯಾದ ಸಾಮಾಜಿಕ ಮಾಧ್ಯಮ ಪ್ರಭಾವಿ, ಸ್ಟಿಲೆಟ್ಟೊ ಸವಾಲನ್ನು ಪ್ರಯತ್ನಿಸಲು ನಿರ್ಧರಿಸಿದರು. ಸವಾಲನ್ನು ಮಾಡಲು ಅಡುಗೆಮನೆಯ ಕೌಂಟರ್ ಹತ್ತಿದರು. ಒಂದು ಪಾತ್ರೆ ಮತ್ತು ಪ್ರೊಟೀನ್ ಪೌಡರ್ ಮೇಲೆ ಒಂದು ಕಾಲಿನಲ್ಲಿ ಯಾವುದೇ ಬೆಂಬಲವಿಲ್ಲದೆ ಕುಳಿತುಕೊಂಡರು. ಇನ್ನೇನು ಇಳಿಯಬೇಕು ಎಂದಾದಾಗ ಕಾಲುಜಾರಿ ಕೆಳಗೆ ಬಿದ್ದಿದ್ದಾರೆ.ಮಗುವಿಗೆ ಜನ್ಮ ನೀಡಿದ ಕೆಲವೇ ವಾರಗಳ ನಂತರ ಮಹಿಳೆಯು ಬೆನ್ನುಮೂಳೆ ಮುರಿದುಕೊಂಡಿದ್ದಾಳೆ ಎಂದು ಹೇಳಲಾಗಿದೆ. ಹೀಗಾಗಿ ಮಗುವಿನ ಆರೋಗ್ಯದ ಬಗ್ಗೆ ನೆಟ್ಟಿಗರು ಮಹಿಳೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲಾ ಗಾಸಿಪ್‌ಗಳಿಗೆ ಪ್ರತಿಕ್ರಿಯಿಸಿದ ಅವರು ಮತ್ತೊಂದು ರೀಲ್ ಅನ್ನು ಪೋಸ್ಟ್ ಮಾಡಿ, ತಾನು ಚೆನ್ನಾಗಿದ್ದೇನೆ ಮತ್ತು ಅದು ಕೇವಲ ಸಣ್ಣ ಮುರಿತ ಎಂದು ಹೇಳಿದ್ದಾರೆ. ತನ್ನ ಮಗುವನ್ನು ಸಹ ತನ್ನ ಇಬ್ಬರು ದಾದಿಯರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.“ಜನರೇ, ನಿಮ್ಮ ಜನಪ್ರಿಯತೆ, ಕಾಳಜಿ ಮತ್ತು ನಿಮ್ಮ ಕಾಮೆಂಟ್‌ಗಳಿಗೆ ಧನ್ಯವಾದಗಳು. ನಾನು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಹಾಗೂ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇನೆ. ತನ್ನ ಮಗುವು ಆರೋಗ್ಯವಾಗಿದ್ದು, ಇಬ್ಬರು ದಾದಿಯರು ಮಗುವಿನ ಆರೈಕೆ ಮಾಡುತ್ತಿದ್ದಾರೆ. ತಾನು ಬಿದ್ದ ಸಮಯದಲ್ಲೂ ಕೂಡ ಓರ್ವ ದಾದಿ ಮಗು ಜೊತೆಗಿದ್ದರು” ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ

Leave a Reply

Your email address will not be published. Required fields are marked *

error: Content is protected !!