ಉದಯವಾಹಿನಿ, ವಾಷಿಂಗ್ಟನ್: ರಷ್ಯಾದೊಂದಿಗಿನ ಉದ್ವಿಗ್ನತೆಯ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದ ಟೆರೇಸ್ ಮೇಲೆ ಕ್ಷಿಪಣಿಗಳನ್ನು ಸ್ಥಾಪಿಸುವ ವ್ಯವಸ್ಥೆ ಮಾಡಬೇಕು ಎಂದು ಪರೋಕ್ಷವಾಗಿ ರಷ್ಯಾಕ್ಕೆ ಟಾಂಗ್ ನೀಡಿದರು. ಮಂಗಳವಾರ ಶ್ವೇತಭವನದ ಟೆರೇಸ್ ಅಂಗರಕ್ಷಕರು, ಸ್ನೈಪರ್‌ಗಳೊಂದಿಗೆ ಕಾಣಿಸಿಕೊಂಡ ಅವರು, ಅಲ್ಲಿ ಸುಮಾರು 20 ನಿಮಿಷಗಳನ್ನು ಕಳೆದರು. ಈ ಸಂದರ್ಭದಲ್ಲಿ ಅವರು ಪ್ರಸ್ತಾವಿತತ ಹೊಸ ಬಾಲ್ ರೂಂನ ಸ್ಥಳವನ್ನು ಕೂಡ ಪರಿಶೀಲನೆ ನಡೆಸಿದರು.
ಅನಿರೀಕ್ಷಿತವಾಗಿ ಮಂಗಳವಾರ ಟ್ರಂಪ್ ಅವರು ಶ್ವೇತಭವನದ ಟೆರೇಸ್ ಗೆ ಬಂದು ಅಲ್ಲಿ ಕೆಲ ಕ್ಷಣಗಳನ್ನು ಕಳೆದರು. ರಷ್ಯಾದೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಅವರು ಇಲ್ಲಿ ಪರಮಾಣು ಕ್ಷಿಪಣಿಗಳನ್ನು ಸ್ಥಾಪಿಸುವ ಬಗ್ಗೆ ಹಾಸ್ಯ ಮಾಡಿದರು. ಅಂಗರಕ್ಷಕರು ಮತ್ತು ಸ್ನೈಪರ್‌ಗಳ ರಕ್ಷಣೆಯಲ್ಲಿ ಅವರು ತಮ್ಮ ಪ್ರಸ್ತಾವಿತ ಹೊಸ ಬಾಲ್ ರೂಂನ ಸ್ಥಳವನ್ನು ಕೂಡ ಪರಿಶೀಲಿಸಿದರು.
ಟ್ರಂಪ್ ಅವರು ಟೆರೇಸ್ ಮೇಲೆ ಏಕೆ ಬಂದಿದ್ದಾರೆ ಎಂದು ಕೆಲವರು ಪ್ರಶ್ನೆಗೆ ಅವರು, ಸ್ವಲ್ಪ ನಡೆಯುತ್ತಿರುವುದಾಗಿ ಹೇಳಿದರು. ಮತ್ತೆ ಕೆಲವರು ಏನು ನಿರ್ಮಿಸಲು ಉದ್ದೇಶಿಸಿದ್ದೀರಿ ಎಂದು ಪ್ರಶ್ನಿಸಿದಾಗ, ನಾನೇ ಶಸ್ತ್ರಾಸ್ತ್ರವನ್ನು ಉಡಾಯಿಸಲು ಪರಮಾಣು ಕ್ಷಿಪಣಿಗಳನ್ನುಇಲ್ಲಿ ಸ್ಥಾಪಿಸುವ ವ್ಯವಸ್ಥೆ ಮಾಡಬೇಕು ಎಂದುಕೊಂಡಿದ್ದೇನೆ ಎಂದು ತಮಾಷೆ ಮಾಡಿದರು.ಇತ್ತೀಚಿನ ಕೆಲವು ದಿನಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ರಷ್ಯಾ ನಡುವೆ ತೀವ್ರ ವಾಗ್ವಾದಗಳು ಉಂಟಾಗಿವೆ.

Leave a Reply

Your email address will not be published. Required fields are marked *

error: Content is protected !!