ಉದಯವಾಹಿನಿ, ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿಯು 2-2 ಅಂತರದಲ್ಲಿ ಸಮಬಲವಾಗಿದೆ. ಈ ಸರಣಿಯ ಭಾರತ ತಂಡದ ಭಾಗವಾಗಿದ್ದ ಚೈನಾಮನ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಅವರು, ಒಂದೇ ಒಂದು ಪಂದ್ಯದಲ್ಲಿಯೂ ಆಡಲು ಅವಕಾಶ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ತಂಡದ ಟೀಮ್‌ ಮ್ಯಾನೇಜ್‌ಮೆಂಟ್‌ ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಅಂದ ಹಾಗೆ ಭಾರತ ತಂಡದ ಮಾಜಿ ಆಟಗಾರ ದೀಪ್‌ ದಾಸ್‌ಗುಪ್ತಾ ಅವರು, ಟೀಮ್‌ ಇಂಡಿಯಾ ಪ್ಲೇಯಿಂಗ್‌ XIನಲ್ಲಿ ಕುಲ್ದೀಪ್‌ ಯಾದವ್‌ಗೆ ಅವಕಾಶ ಸಿಗದೆ ಇರಲು ಪ್ರಮುಖ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.

ಈ ಸರಣಿಯಲ್ಲಿ ಇಂಗ್ಲೆಂಡ್‌ ತಂಡ ನಿಯಮಿತವಾಗಿ 350ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿತ್ತು. ಈ ಹಿನ್ನೆಲೆಯಲ್ಲಿ ಕುಲ್ದೀಪ್‌ ಯಾದವ್‌ಗೆ ಪ್ಲೇಯಂಗ್‌ XIನಲ್ಲಿ ಏಕೆ ಅವಕಾಶ ನೀಡುತ್ತಿಲ್ಲ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ತಮ್ಮ ಎಕ್ಸ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ದೀಪ್‌ ದಾಸ್‌ಗುಪ್ತಾ ವಿವರಿಸಿದ್ದಾಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡಕ್ಕೆ ಎದುರಾಗಿದ್ದ ಸಮಸ್ಯೆ ಏನೆಂದರೆ, ಆತಿಥೇಯರು ತ್ವರಿತವಾಗಿ ರನ್‌ ಗಳಿಸುತ್ತಿದ್ದರು. ಹಾಗಾಗಿ ಭಾರತ ತಂಡ 350 ರಿಂದ 400 ರನ್‌ಗಳನ್ನು ಗಳಿಸಿ ಪಂದ್ಯದಲ್ಲಿ ಉಳಿಯಬೇಕಾದ ಅಗತ್ಯವಿತ್ತು. ಈ ಕಾರಣದಿಂದಲೇ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಕುಲ್ದೀಪ್‌ ಯಾದವ್‌ಗೆ ಅವಕಾಶ ಸಿಕ್ಕಿರಲಿಲ್ಲ ಎಂದಿದ್ದಾರೆ. ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನವನ್ನು ತೋರಿದ್ದರು. ಆದರೆ, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು. ಮತ್ತೊಂದು ಕಡೆಗೆ ಕರುಣ್‌ ನಾಯರ್‌ ಹಾಗೂ ಸಾಯಿ ಸುದರ್ಶನ್‌ ವಿಫಲರಾಗಿದ್ದರು. ಈ ಕಾರಣದಿಂದಲೇ ಹೆಚ್ಚುವರಿ ಸ್ಪಿನ್ನರ್‌ಗೆ ಅವಕಾಶ ಸಿಕ್ಕಿರಲಿಲ್ಲ.ರೆ ಹಾಗೂ ಸರಣಿಯ ವೇಳೆ ಈ ಬಗ್ಗೆ ಹೆಟ್‌ ಕೋಚ್‌ ಗೌತಮ್‌ ಗಂಭೀರ್‌ ಹೇಳಿದ್ದ ಮಾತನ್ನು ಇದೀಗ ದಾಸ್‌ಗುಪ್ತಾ ರಿವೀಲ್‌ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!