ಉದಯವಾಹಿನಿ, ನವದೆಹಲಿ: ಮುಂಬರುವ ದುಲೀಪ್‌ ಟ್ರೋಫಿ ಟೂರ್ನಿಯ (Duleep Trophy 2025) ನಿಮಿತ್ತ ಉತ್ತರ ವಲಯ (North ZOne) ತಂಡವನ್ನು ಪ್ರಕಟಿಸಲಾಗಿದ್ದು, ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ಗೆ (Shubman Gill) ನಾಯಕತ್ವವನ್ನು ನೀಡಲಾಗಿದೆ. ಭಾರತ ತಂಡದ ಯುವ ವೇಗಿಗಳಾದ ಅರ್ಷದೀಪ್‌ ಸಿಂಗ್‌ ಹಾಗೂ ಹರ್ಷಿತ್‌ ರಾಣಾ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಆಟಗಾರರು ಕೂಡ ಈ ತಂಡದಲ್ಲಿ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಅಂದ ಹಾಗೆ ಶುಭಮನ್‌ ಗಿಲ್‌ ಅವರ ಆತ್ಮೀಯ ಗೆಳೆಯ ಅಭಿಷೇಕ್‌ ಶರ್ಮಾಗೆ ಈ ತಂಡದಲ್ಲಿ ಅವಕಾಶ ಸಿಗಲಿಲ್ಲ. ಏಕೆಂದರೆ ಸೆ 9 ರಂದು ಆರಂಭವಾಗುವ ಏಷ್ಯಾ ಕಪ್‌ ಟೂರ್ನಿಯಲ್ಲಿ ಅವರು ಭಾರತ ತಂಡದ ಪರ ಆಡಲಿದ್ದಾರೆ. ಆಗಸ್ಟ್‌ 29 ರಂದು ದುಲೀಪ್‌ ಟ್ರೋಫಿ ಆರಂಭವಾಗಲಿದೆ.

ಈ ಟೂರ್ನಿಯು ತನ್ನ ಮೂಲ ಸ್ವರೂಪಕ್ಕೆ ಮರಳಲಿದೆ. ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಈಶಾನ್ಯ ವಲಯಗಳಿಂದ ಆರು ತಂಡಗಳು ಪ್ರಶಸ್ತಿಗಾಗಿ ಈ ಟೂರ್ನಿಯಲ್ಲಿ ಕಾದಾಟ ನಡಸಲಿವೆ. ಇದು ಆಯಾ ವಲಯಗಳ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ. ಆದ್ದರಿಂದ, ಎಲ್ಲಾ ಆಟಗಾರರಿಗೆ ನ್ಯಾಯಯುತ ಅವಕಾಶಗಳನ್ನು ನೀಡಲು ಬಿಸಿಸಿಐ ವಲಯ ಸ್ವರೂಪವನ್ನು ಮರಳಿ ತರಲು ನಿರ್ಧರಿಸಿದೆ.
ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಉತ್ತರ ವಲಯದ ಆಯ್ಕೆದಾರರು ಶುಭಮನ್ ಗಿಲ್‌, ಅರ್ಷದೀಪ್‌ ಸಿಂಗ್‌ ಮತ್ತು ಹರ್ಷಿತ್ ರಾಣಾ ಅವರನ್ನು ಟೂರ್ನಿಯ ಸಮಯದಲ್ಲಿ ರಾಷ್ಟ್ರೀಯ ಕರ್ತವ್ಯಕ್ಕೆ ಕರೆ ಬಂದರೆ, ಅವರ ಸ್ಥಾನಗಳಿಗೆ ಬದಲಿ ಆಟಗಾರರನ್ನು ಘೋಷಿಸಿದ್ದಾರೆ. ಭಾರತ ತಂಡ 2025ರ ಏಷ್ಯಾ ಕಪ್‌ ಟೂರ್ನಿಯ ನಿಮಿತ್ತ ತರಬೇತಿಯನ್ನು ಪ್ರಾರಂಭಿಸಲಿದೆ. ಗಿಲ್‌ ಇನ್ನು ಮುಂದೆ ಭಾರತ ಟಿ20ಐ ತಂಡದಲ್ಲಿ ನಿಯಮಿತವಾಗಿಲ್ಲದಿದ್ದರೂ, ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ, ಗೌತಮ್ ಗಂಭೀರ್ ಅವರ ಮಾರ್ಗದರ್ಶನದ ಅಡಿಯಲ್ಲಿ ಟಿ20ಐ ತಂಡದಲ್ಲಿ ನಿಯಮಿತವಾಗಿ ಆಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!