ಉದಯವಾಹಿನಿ, ಮಡಿಕೇರಿ: ಸೂರಿಲ್ಲದವ್ರಿಗೆ ಸೂರು, ನಿವೇಶನ ಇಲ್ಲದೋರಿಗೆ ಸೈಟು, ಯಾರೂ ಮನೆಯಿಲ್ಲದೆ ಬದುಕಬಾರದು ಇದು ಸರ್ಕಾರದ ಘೋಷಣೆ, ಹಾಗೆ ಹೀಗೆ ಅಂತಾ ಭಾಷಣಮಾಡೋ ನಾಯಕರು, ಮಂತ್ರಿಗಳು ಒಂದು ಸಲ ಇತ್ತ ಈ ಊರಿನ ವೃದ್ದೆಯ ಸಂಕಷ್ಟದ ಪರಿಸ್ಥಿತಿ ನೋಡಿದ್ರೆ ಅವರ ಯೋಜನೆಗಳು ನಿಜವಾಗಿಯೂ ಬಡವರಿಗೆ ತಲುಪಿದೆಯಾ ಎಂಬುದರ ಸತ್ಯ ಅರಿವಾಗುತ್ತೆ. ಅದ್ರಲ್ಲೂ ಕೊಡಗಿನ ಈ ಗ್ರಾಮದಲ್ಲಿರುವ ತಾಯಿ-ಮಗನ ರೋಧನ ಎಂತಹವರ ಹೃದಯ ಕರಗಿಸುವಂತಿದೆ.ಧೋ..ಎಂದು ಸುರಿಯುತ್ತಿರುವ ಮಳೆ. ಮಳೆ ಗಾಳಿ ಎನ್ನದೇ ಕೆಸರು ಮಿಶ್ರಿತ ಮಣ್ಣಿನಲ್ಲೇ ಮಲಗಿರೋ ವೃದ್ದೆ. ಇವರ ಪರಿಸ್ಥಿತಿ ಕಂಡು ಗ್ರಾಮಸ್ಥರೇ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಆಡಳಿತ ವರ್ಗದವರಿಗೆ ಇಡೀ ಶಾಪ ಹಾಕುತ್ತಿರುವ ಗ್ರಾಮಸ್ಥರು. ಯೆಸ್ ಇಂತಹದೊಂದು ಹೃದಯ ಕರಗಿಸುವಂತಹ ದೃಶ್ಯ ಕಂಡುಬಂದಿದ್ದು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹರದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲಿಕಾರ್ಜುನ ಕಾಲೋನಿಯಲ್ಲಿ.
ಹೀಗೆ ಮನೆ ಇಲ್ಲದೆ ಜೀವನ ಸಾಗಿಸುತ್ತಿರೋದು ಬೈರಿ ಎಂಬುವವರ ಕುಟುಂಬ. ಕಳೆದ 30-40 ವರ್ಷಗಳಿಂದ ಈ ಕುಟುಂಬ ಇದೇ ಗ್ರಾಮದಲ್ಲಿ ವಾಸವಾಗಿತ್ತು. ಮಣ್ಣಿನ ಮನೆಯಲ್ಲಿ ವಾಸವಿದ್ದ ಕುಟುಂಬ 2018 ರಲ್ಲಿ ಮನೆ ಕಳೆದುಕೊಂಡಿತು. ಆಗಿನಿಂದಲೂ ಟಾರ್ಪಲ್ ಹೊದಿಕೆಯಲ್ಲೇ ಬದುಕು ದೂಡುತ್ತಿದೆ. ಬುದ್ಧಿಮಾಂದ್ಯ ಮಗನೊಂದಿಗೆ ತಾಯಿ ಒಂದು ಟಾರ್ಪಲ್ ಅಡಿಯಲ್ಲಿ ವಾಸವಾಗಿದ್ದಾರೆ. ಕೆಲ ದಿನಗಳ ಹಿಂದೆ ಗುತ್ತಿಗೆದಾರರಾದ ಅಬ್ಬಾಸ್ ಎಂಬುವವರು ಈ ಕುಟುಂಬದ ಪರಿಸ್ಥಿತಿ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ರು. ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಇನ್ನೂ ಇಂತಹ ಕುಟುಂಬಗಳಿಗೆ ಮನೆಗಳಿಲ್ಲದೆ ಶೋಚನೀಯ ಬದುಕು ಕಾಣುತ್ತಿವೆ. ಆಡಳಿತ ವರ್ಗ ಇದೆಯೇ ಎಂದು ಅಕ್ರೋಶ ಹೋರ ಹಾಕಿದ್ರು.
