ಉದಯವಾಹಿನಿ, ತುಮಕೂರು: ನಗರದ ಗೋಕುಲ ಬಡವಾಣೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ವರದಕ್ಷಿಣೆ ಕಿರುಕುಳ ಆರೋಪಕೇಳಿಬಂದಿದೆ.ಪವಿತ್ರಾ (29) ಮೃತ ದುರ್ದೈವಿ. ಪವಿತ್ರಾಳ ಪತಿ ಪ್ರಿಯದರ್ಶನ್ ಬಿಎಂಟಿಸಿ ನೌಕರನಾಗಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದಲೂ ಪ್ರತಿದಿನ ಪತಿ ಕಿರುಕುಳ ನೀಡುತ್ತಿದ್ದ ಅನ್ನೋ ಆರೋಪ ಕೇಳಿಬಂದಿದೆ. ನಿನ್ನೆ ಕೂಡ ಪತಿ ಪ್ರಿಯದರ್ಶನ್ ನೀಡುತ್ತಿದ್ದ ಕಿರುಕುಳ ಕುರಿತು ಪವಿತ್ರಾ ತಾಯಿಯೊಂದಿಗೆ ಹೇಳಿಕೊಂಡಿದ್ದರಂತೆ. ಬೆಳಗಾಗುವಷ್ಟರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪವಿತ್ರಾ ಶವ ಪತ್ತೆಯಾಗಿದೆ. ಈ ಸಂಬಂಧ ತುಮಕೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿ ಪ್ರಿಯದರ್ಶನ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
