ಉದಯವಾಹಿನಿ, ನವದೆಹಲಿ: ದೈತ್ಯ ಹಾವು ಅದರಲ್ಲೂ ಕಾಳಿಂಗ ಸರ್ ನೋಡಿದರೆ ಅದೆಷ್ಟು ಧೈರ್ಯಶಾಲಿಯ ಎದೆ ಒಮ್ಮೆ ನಡುಗಿ ಬಿಡುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿಯೊಬ್ಬರು ಸರಳ ಪೈಪ್ ಬಳಸಿ ಭಾರೀ ದೊಡ್ಡ ಗಾತ್ರದ ಕಾಳಿಗ ಸರ್ವವನ್ನು ಹಿಡಿದ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರನ್ನು ಬೆಚ್ಚಿ ಬೀಳಿಸಿದೆ. ವಿಡಿಯೋದಲ್ಲಿ ರಕ್ಷಣಾ ಕಾರ್ಯವು ಎಷ್ಟು ಭಯಾನಕ ಮತ್ತು ರೋಮಾಂಚಕಾರಿ ಇತ್ತು ಎಂದರೆ ನೆಟ್ಟಿಗರೇ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ಆಗಸ್ಟ್ 3ರಂದು ಇನ್‌ಸ್ಟಾಗ್ರಾಮ್ ನಲ್ಲಿ ವೈರಲ್ ಆದ ಈ ವಿಡಿಯೋದಲ್ಲಿ, ಮನೆಯೊಂದರ ಅಂಗಳದಲ್ಲಿ ಹಾವು ಚಲಿಸುತ್ತಿರುವುದು ಕಾಣುತ್ತದೆ. ಹಾವು ತುಂಬಾ ಅಪಾಯಕಾರಿ ಆಗಿದ್ದರೂ, ವ್ಯಕ್ತಿಯೂ ಬಹಳ ಶಾಂತವಾಗಿ ಮತ್ತು ಆತ್ಮವಿಶ್ವಾಸದಿಂದ ಕೆಲಸ ಮಾಡುತ್ತಾನೆ. ಹಾವು ಪದೇ ಪದೆ ಆತನ ಮೇಲೆ ದಾಳಿ ಮಾಡಲು ಯತ್ನಿಸಿದರೂ, ಆತ ತನ್ನ ಕೈಯಲ್ಲಿರುವ ಪೈಪ್‌ ನಿಂದ ತನ್ನನ್ನು ರಕ್ಷಿಸಿಕೊಳ್ಳುತ್ತಾನೆ. ಈ ಪೈಪ್‌ಗೆ ಒಂದು ಚೀಲವನ್ನು ಅಳವಡಿಸಲಾಗಿತ್ತು. ಸುಮಾರು ಅರ್ಧ ಗಂಟೆ ಹೋರಾಟದ ನಂತರ, ಅಂತಿಮವಾಗಿ ಆ ಬೃಹತ್ ಕಾಳಿಂಗ ಸರ್ಪ ಚೀಲದೊಳಗೆ ಸೇರುತ್ತದೆ.
ವೈರಲ್ ಆದ ವಿಡಿಯೊದಲ್ಲಿ ವ್ಯಕ್ತಿ ಪೈಪ್‌ನ ನೆರವಿನಿಂದ ಅದನ್ನು ನಿಯಂತ್ರಿಸಲು ಯತ್ನಿಸುವ ದೃಶ್ಯ ಕಾಣಬಹುದು. ಹಾವು ದ್ವೇಷದಿಂದ ಮರು ದಾಳಿ ಮಾಡಿದರೂ, ಪೈಪ್‌ನಿಂದ ತನ್ನನ್ನು ರಕ್ಷಿಸಿಕೊಂಡು, ಕೊನೆಗೂ ಚೀಲವನ್ನು ಜೋಡಿಸಿ ಕಿಂಗ್ ಕೋಬ್ರಾವನ್ನು ಚೀಲದೊಳಗೆ ಹಾಕಲು ಯಶಸ್ವಿಯಾಗುತ್ತಾನೆ. ಈ ವಿಡಿಯೋ ಕೆಲವೇ ದಿನಗಳಲ್ಲಿ 1 ಮಿಲಿಯನ್‌ಗಿಂತ ಹೆಚ್ಚು ಪ್ರತಿಕ್ರಿಯೆ ಗಳನ್ನು ಪಡೆದು, ಈಗಾಗಲೇ ಮಿಲಿಯನ್‌ ಗಟ್ಟಲೆ ವೀಕ್ಷಣೆಗಳನ್ನು ಪಡೆದಿದೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದು ಆಶ್ಚರ್ಯ ಕೂಡ ವ್ಯಕ್ತ ಪಡಿಸಿದ್ದಾರೆ. ಕೆಲವರು ವ್ಯಕ್ತಿಯ ಧೈರ್ಯವನ್ನು ಪ್ರಶಂಸಿದರೆ ಇನ್ನು ಕೆಲವರು ಹಾವಿನ ಭೀಕರ ಗಾತ್ರವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

Leave a Reply

Your email address will not be published. Required fields are marked *

error: Content is protected !!