ಉದಯವಾಹಿನಿ, ನವದೆಹಲಿ: ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತಿ ಪಡೆದ ನಟಿ ಮಲೈಕಾ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ‘ಡಾಲಿ ಕಿ ಡೋಲಿ’, ‘ಹ್ಯಾಪಿ ನ್ಯೂ ಇಯರ್’, ‘ದಬಂಗ್ 2’, ‘ದಬಂಗ್’, ‘ಇಂಟರ್ನ್ಯಾಷನಲ್ ಖಿಲಾಡಿ’, ‘ಇಎಂಐ’, ‘ಕಿಡ್ನ್ಯಾಪ್’, ‘ಹೌಸ್‌ಫುಲ್’, ‘ಪ್ರೇಮ್ ಕಾ ಗೇಮ್’ ಸೇರಿದಂತೆ ಅನೇಕ ಹಿಟ್ ಸಿನಿಮಾದಲ್ಲಿ ಅಭಿ ನಯಿಸಿದ್ದಾರೆ. ಅದರೊಂದಿಗೆ ಜಲಕ್ ದಿಕ್ ಲಾಜಾ, ಹಿಪ್ ಹಾಪ್ ಇಂಡಿಯನ್ ಸೀಸನ್ 2 ಸೇರಿದಂತೆ ಅನೇಕ ರಿಯಾಲಿಟಿ ಶೋನಲ್ಲಿ ಕೂಡ ಕಾಣಿಸಿಕೊಂಡು ಫೇಮಸ್ ಆಗಿದ್ದರು. ನಟಿ ಮಲೈಕಾ ಅವರು ವೃತ್ತಿ ಜೀವನದಲ್ಲಿ ಖ್ಯಾತಿ ಪಡೆಯುವ ಜೊತೆ ಜೊತೆಗೆ ವೈಯಕ್ತಿಕ ವಿಚಾರದಿಂದಲೂ ಹೆಚ್ಚು ಪ್ರಸಿದ್ಧಿಯಲ್ಲಿ ಇದ್ದಾರೆ. ಇದೀಗ ವಿಚ್ಛೇದನದ ಬಳಿಕ ನಟಿ ಮಲೈಕಾ ಅವರು ಮರು ವಿವಾಹ ವಾಗ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಬಗ್ಗೆ ಅನೇಕ ಗಾಸಿಪ್ ಹರಿದಾಡಿದ ಬೆನ್ನಲ್ಲೆ ಸ್ವತಃ ಮಲೈಕಾ ಅವರೇ ಇತ್ತೀಚಿನ ಸಂದರ್ಶನ ಈ ಬಗ್ಗೆ ಸ್ಪಷ್ಟಣೆ ನೀಡಿದ್ದಾರೆ.
ನಟಿ ಮಲೈಕಾ ಅರೋರಾ ಅವರು ತಮ್ಮ 25ನೇ ವಯಸ್ಸಿನಲ್ಲಿ 1998ರಲ್ಲಿ ಅರ್ಬಾಜ್ ಖಾನ್ ಅವರನ್ನು ವಿವಾಹವಾದರು. ಇವರಿಬ್ಬರಿಗು ಅರ್ಹಾನ್ ಖಾನ್ ಎಂಬ ಹೆಸರಿನ ಮಗ ಕೂಡ ಇದ್ದಾನೆ. 18 ವರ್ಷಗಳ ದಾಂಪತ್ಯ ಜೀವನವನ್ನು ಅತ್ಯಂತ ಖುಷಿಯಲ್ಲಿ ಕಳೆದಿದ್ದಾರೆ. ಅನಂತರ ದಂಪತಿಗಳು ಪರಸ್ಪರ ವೈಮನಸ್ಸು ಮೂಡಿದ್ದ ಕಾರಣಕ್ಕೆ 2016ರಲ್ಲಿ ವಿಚ್ಛೇದನ ಪಡೆಯಲು ನಿರ್ಧರಿಸಿದರು. 2017 ರಲ್ಲಿ ವಿಚ್ಛೇದನವನ್ನು ಕೂಡ ಪಡೆದರು. ಈ ಮೂಲಕ ಅರ್ಬಾಜ್ ಖಾನ್ ಅವರು ವಿಚ್ಛೇದನದ ಬಳಿಕ 2023ರಲ್ಲಿ ಶುರಾ ಖಾನ್ ಅವರನ್ನು ಮರು ಮದುವೆ sಯಾಗಿದ್ದಾರೆ. ಆದರೆ ಮಲೈಕಾ ಒಂಟಿಯಾಗಿ ಇದ್ದರು. ಇವರು ಕೂಡ ಎರಡನೇ ವಿವಾಹವಾಗಲಿದ್ದಾರೆ ಎಂಬ ವದಂತಿ ಅನೇಕ ವರ್ಷದಿಂದ ಕೇಳಿ ಬರುತ್ತಿದೆ. ಇದೀಗ ನಟಿ ಮಲೈಕಾ ಈ ಬಗ್ಗೆ ಮಾತನಾಡಿದ್ದಾರೆ.
ನಟಿ ಮಲೈಕಾ ಅವರು ಇತ್ತೀಚೆಗಷ್ಟೇ ಖಾಸಗಿ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದು, ಕೆಲವು ವೈಯಕ್ತಿಕ ವಿಚಾರವನ್ನು ಹಂಚಿಕೊಂಡಿದ್ದಾರೆ., ನಾನು ಬಹಳ ಚಿಕ್ಕ ವಯಸ್ಸಿಗೆ ಮದುವೆ ಯಾದೆ. ಆಗ ನಾನು ಸಮಯ ತೆಗೆದುಕೊಳ್ಳಬೇಕಿತ್ತು. ಮದುವೆ ನಂತರದ ಜೀವನ ಎಲ್ಲವನ್ನು ಯೋಚಿಸಿ ನಿರ್ಧಾರ ಕೈಗೊಳ್ಳ ಬೇಕಿತ್ತು. ಈಗಿನ ಜನರೇಶನ್ ಮದುವೆ ವಿಚಾರದಲ್ಲಿ ಬಹಳ ಕ್ಲ್ಯಾರಿಟಿ ಹೊಂದಿ ರುತ್ತಾರೆ. ಅದು ಒಳ್ಳೆಯ ನಿರ್ಧಾರ ಎಂದು ಅವರು ಹೇಳಿದ್ದಾರೆ.
