ಉದಯವಾಹಿನಿ, 2025 ರ ಏಷ್ಯಾಕಪ್ಗೆ ಆತಿಥೇಯ ಬಿಸಿಸಿಐ ತನ್ನ ತಂಡವನ್ನು ಪ್ರಕಟಿಸಿದೆ. ಈ 20 ಜನರ ತಂಡದಲ್ಲಿ ಬಲಿಷ್ಠ ಆಟಗಾರರ ಪಡೆಯೇ ಸೇರಿದೆ. ಹೀಗಾಗಿ ಯಾವ 11 ಆಟಗಾರರು ಕಣಕ್ಕಿಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಭಾರತ ತಂಡದಿಂದ ಹೊರಗುಳಿದಿರುವ ಮಾಜಿ ನಾಯಕ ಅಜಿಂಕ್ಯ ರಹಾನೆ ಈ ಏಷ್ಯನ್ ಕಪ್ಗೆ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದಾರೆ.
ರಹಾನೆ ತಮ್ಮ ಪ್ಲೇಯಿಂಗ್ 11 ನಲ್ಲಿ ಶುಭ್ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಿದ್ದಾರೆ. 3 ನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಅವರನ್ನು ಕಣಕ್ಕಿಳಿಸಿದ್ದಾರೆ. ಹಾಗೆಯೇ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ 4 ನೇ ಕ್ರಮಾಂಕದಲ್ಲಿ ಮತ್ತು ಮಾಜಿ ಉಪನಾಯಕ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ 5 ನೇ ಕ್ರಮಾಂಕದಲ್ಲಿ ಸ್ಥಾನ ನೀಡಿದ್ದಾರೆ.
6 ನೇ ಕ್ರಮಾಂಕದಲ್ಲಿ ರಹಾನೆ, ಕಮ್‌ಬ್ಯಾಕ್ ಮ್ಯಾನ್ ಜಿತೇಶ್ ಶರ್ಮಾ ಅವರನ್ನು ವಿಕೆಟ್ ಕೀಪಿಂಗ್ ಆಯ್ಕೆಯಾಗಿ ಆಯ್ಕೆ ಮಾಡಿದ್ದಾರೆ. ಜಿತೇಶ್ 2025 ರ ಐಪಿಎಲ್‌ನಲ್ಲಿ ಫಿನಿಷರ್ ಆಗಿ ಉತ್ತಮವಾಗಿ ಆಡಿದ್ದರು. ಆದ್ದರಿಂದ ಅವರು ಸಂಜು ಬದಲು ಜಿತೇಶ್ಗೆ ಮಣೆಹಾಕಿದ್ದಾರೆ. 7 ನೇ ಕ್ರಮಾಂಕದಲ್ಲಿ ಮತ್ತೊಬ್ಬ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಅವಕಾಶ ಸಿಕ್ಕಿದೆ.
