ಉದಯವಾಹಿನಿ, ಕೋಲ್ಕತಾ: ಇಂದಿನ ದಿನಗಳಲ್ಲಿ ಕರೆಂಟ್ ಇಲ್ಲದೆ ವಾಸಿಸುವುದೇ ಕಷ್ಟ ಆಗಿದೆ. ಮನೆಯಲ್ಲಿ, ರಾತ್ರಿ ವೇಳೆ ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಹೋಗಲು ಬಲ್ಬ್ ಉರಿಸುತ್ತೇವೆ. ಬಲ್ಬ್ ಉರಿಸಿದರೆ ಏನೋ ಧೈರ್ಯ. ಹಿಂದೆಲ್ಲಾ ನಮ್ಮ ಹಿರಿಯರಿಗೆ ಚಿಮಣಿ ದೀಪವೇ ಬೆಳಕಾಗಿತ್ತು. ಆದರೆ, ಮೊದಲ ಬಾರಿಗೆ ದೇಶಕ್ಕೆ ವಿದ್ಯುತ್ ಅನ್ನು ಬ್ರಿಟೀಷರು ಪರಿಚಯಿಸಿದಾಗ ಭಾರತೀಯರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? 19ನೇ ಶತಮಾನದಲ್ಲಿ (19th century) ಭಾರತದಲ್ಲಿ ಉರಿಯುತ್ತಿರುವ ಬಲ್ಬ್ ನೋಡಿದರೆ ಭಯಪಡುವ ಮಂದಿಯೇ ಅನೇಕರಿದ್ದರಂತೆ.

ಹೌದು, 145 ವರ್ಷಗಳ ಹಿಂದೆ ವಿಶೇಷವಾಗಿ ಕೋಲ್ಕತ್ತಾದಲ್ಲಿ ಮೊದಲ ಬಾರಿಗೆ ವಿದ್ಯುತ್ ಬಲ್ಬ್‌ಗಳನ್ನು ಬೆಳಗಿಸಲಾಯಿತು. ವಿದ್ಯುತ್ ಬೀದಿ ದೀಪಗಳ ಅಳವಡಿಕೆಯು ವಿಸ್ಮಯ ಮತ್ತು ಭಯ ಎರಡರಿಂದಲೂ ಜನಸಮೂಹವನ್ನು ಆಕರ್ಷಿಸಿತು. ಅನೇಕ ಮಂದಿ ಬಲ್ಬ್‌ಗಳನ್ನು ದೆವ್ವಗಳೆಂದು ನಂಬಿದ್ದರು. ದೀಪಗಳನ್ನು ಆಶ್ಚರ್ಯದಿಂದ ನೋಡುತ್ತಿದ್ದರು ಮತ್ತು ಅವುಗಳನ್ನು ಭೂತದ ಕಣ್ಣು (Eye of the Ghost) ಎಂದು ಕರೆದರು.

1880ರ ದಶಕದಲ್ಲಿ ಕೋಲ್ಕತ್ತಾದಲ್ಲಿ ಉರಿಯುತ್ತಿರುವ ಬಲ್ಬ್‌ಗಳನ್ನು ನೋಡಿ ಅನೇಕ ಮಂದಿ ಭಯಪಡುತ್ತಿದ್ದುದು ಸಾಮಾನ್ಯವಾಗಿತ್ತು. ಕೆಲವರು ಬಲ್ಬ್‌ಗಳನ್ನು ದೆವ್ವಗಳ ಕಣ್ಣುಗಳು ಎಂದು ಭಾವಿಸಿ ಅದರ ಹತ್ತಿರ ಹೋಗದಂತೆ ಎಚ್ಚರಿಸುತ್ತಿದ್ದರು. ವಿಶೇಷವಾಗಿ ಮಹಿಳೆಯರು, ದೆವ್ವ ಎಂದು ಹೆದರುತ್ತಿದ್ದರು. ತಮ್ಮ ಮಕ್ಕಳು ದೀಪಗಳನ್ನು ನೋಡದಂತೆ ಎಚ್ಚರಿಸುತ್ತಿದ್ದರು. 19ನೇ ಶತಮಾನದ ಕೊನೆಯಲ್ಲಿ ವಿದ್ಯುತ್ ಆಗಮನವು ಕೆಲವರಲ್ಲಿ ಭಯ ತರಿಸಿದರೆ, ಇನ್ನೂ ಕೆಲವರಲ್ಲಿ ಅಚ್ಚರಿ ತಂದಿತ್ತು. ವಿದ್ಯುತ್ ಬರುವ ಮೊದಲು, ಕೋಲ್ಕತ್ತಾದ ಬೀದಿಗಳು ಕಲ್ಲಿದ್ದಲು-ಅನಿಲದಿಂದ ಚಾಲಿತವಾದ ಅನಿಲ ದೀಪಗಳಿಂದ ಬೆಳಗುತ್ತಿದ್ದವು. 1857 ರ ಹೊತ್ತಿಗೆ, ಪ್ರಮುಖ ಬೀದಿಗಳಲ್ಲಿ ಕಲ್ಲಿದ್ದಲು-ಅನಿಲದ ದೀಪ ಕಂಬಗಳನ್ನು ಸ್ಥಾಪಿಸಲಾಯಿತು. ಕೋಲ್ಕತ್ತಾ ವಿಶಿಷ್ಟವಾಗಿ ಅನಿಲ ಮತ್ತು ವಿದ್ಯುತ್ ಬೀದಿ ದೀಪಗಳನ್ನು ಹೊಂದಿತ್ತು. ಇದು ಜಾಗತಿಕವಾಗಿ ಈ ರೀತಿಯಲ್ಲಿ ಬೆಳಗಿದ ಮೂರನೇ ನಗರವಾಗಿದೆ.

Leave a Reply

Your email address will not be published. Required fields are marked *

error: Content is protected !!