ಉದಯವಾಹಿನಿ, ವಾಷಿಂಗ್ಟನ್‌: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದ್ದು, ಗ್ರಾಮೀಣ ಮಧ್ಯ ಪೆನ್ಸಿಲ್ವೇನಿಯಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗುಂಡು ಹಾರಿಸಿದವನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ. ಗುಂಡಿನ ದಾಳಿ ನಡೆದಾಗ ಅಧಿಕಾರಿಗಳು ಆತನನ್ನು ಬಂಧಿಸಲು ಮುಂದಾದರು. ಆದರೆ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಎಂದು ತಿಳಿದು ಬಂದಿದೆ.
ಇದು ಯಾರ್ಕ್ ಕೌಂಟಿ ಮತ್ತು ಪೆನ್ಸಿಲ್ವೇನಿಯಾದ ಸಂಪೂರ್ಣ ಕಾಮನ್‌ವೆಲ್ತ್‌ಗೆ ಸಂಪೂರ್ಣವಾಗಿ ದುರಂತ ಮತ್ತು ವಿನಾಶಕಾರಿ ದಿನವಾಗಿದೆ. ಮೃತರ ಕುಟುಂಬಗಳಿಗಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ. ದುಖಃವನ್ನು ಬರಿಸುವ ಶಕ್ತಿಯನ್ನು ದೇವರು ಅವರಿಗೆ ನೀಡಲಿ ಎಂದು ರಾಜ್ಯ ಪೊಲೀಸ್ ಆಯುಕ್ತ ಕರ್ನಲ್ ಕ್ರಿಸ್ಟೋಫರ್ ಪ್ಯಾರಿಸ್ ಹೇಳಿದ್ದಾರೆ. ಸದ್ಯ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗಿದೆ. ಗವರ್ನರ್‌ ಕೂಡ ಆಸ್ಪತ್ರೆಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಕಳೆದ ವಾರ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸದಂತೆ ಹೇಳಿದ್ದಕ್ಕೆ ಹರಿಯಾಣದ ಯುವಕನನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿತ್ತು. ಹರಿಯಾಣದ ಜಿಂದ್ ಜಿಲ್ಲೆಯ ಬರಾಹ್ ಕಲಾ ಗ್ರಾಮದ ಕಪಿಲ್ (26) ಹತ್ಯೆಯಾದ ಯುವಕ. ಕಪಿಲ್ ಮೂರು ವರ್ಷದ ಹಿಂದೆಯೇ ಕೆಲಸದ ನಿಮಿತ್ತ ಅಮೆರಿಕಕ್ಕೆ ತೆರಳಿದ್ದರು. ಕಪಿಲ್ ಕೆಲಸ ಮಾಡುತ್ತಿದ್ದ ಸ್ಟೋರ್‌ನ ಹೊರಗಡೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಇದನ್ನು ಗಮನಿಸಿದ ಕಪಿಲ್ ಆತನ ಬಳಿ, ಸಾರ್ವಜನಿಕ ಸ್ಥಳವಾದ ಇಲ್ಲಿ ಮೂತ್ರ ವಿಸರ್ಜಿಸಬೇಡ ಎಂದಿದ್ದರು. ಈ ವೇಳೆ ಕೋಪಗೊಂಡ ವ್ಯಕ್ತಿ ಕಪಿಲ್‌ನ ಮೇಲೆ ಗುಂಡಿನ ದಾಳಿ ನಡೆಸಿದ್ದ.

Leave a Reply

Your email address will not be published. Required fields are marked *

error: Content is protected !!