ಉದಯವಾಹಿನಿ, ಕಣ್ಣೂರು: ಚೂಯಿಂಗ್ ಗಮ್ ತಿನ್ನುತ್ತಿದ್ದಾಗ ಬಾಲಕಿಯೊಬ್ಬಳ ಗಂಟಲಿನೊಳಗೆ ಸಿಲುಕಿ ಕೆಲಕಾಲ ಆಕೆ ಉಸಿರುಗಟ್ಟಿದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಕೂಡಲೇ ಇದನ್ನು ಅರಿತ ಯುವಕರ ತಂಡವು ಬಾಲಕಿಯನ್ನು ರಕ್ಷಿಸಿದೆ. ಕೇರಳದ (Kerala) ಕಣ್ಣೂರಿನಲ್ಲಿ ಈ ಘಟನೆ ನಡೆದಿದೆ. ಬಾಲಕಿಯೇ ತನಗೆ ಅನಾನುಕೂಲವಾದ ತಕ್ಷಣ ಸ್ಥಳದಲ್ಲಿದ್ದ ಯುವಕರ ಬಳಿ ಹೋಗಿದ್ದಾಳೆ. ಕೂಡಲೇ ಯುವಕರು ಬಾಲಕಿಯನ್ನು ರಕ್ಷಿಸಿದ್ದಾರೆ. ಘಟನೆಯ ಇಡೀ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ, ಬಾಲಕಿ ಸೈಕಲ್ ತುಳಿದುಕೊಂಡು ಬರುತ್ತಿರುವುದನ್ನು ತೋರಿಸಲಾಗಿದೆ. 8 ವರ್ಷದ ಬಾಲಕಿ ಸೈಕಲ್ ಸವಾರಿ ಮಾಡುವಾಗ ಚೂಯಿಂಗಮ್ ಜಗಿದಿದ್ದಾರೆ. ಈ ಸಮಯದಲ್ಲಿ ಯುವಕರ ಗುಂಪು ಪರಸ್ಪರ ಮಾತನಾಡುತ್ತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ, ಬಾಲಕಿಗೆ ಗಂಟಲಿನಲ್ಲಿ ಅಸ್ವಸ್ಥತೆಯ ಅನುಭವವಾಯಿತು. ಅವಳು ಸೇವಿಸುತ್ತಿದ್ದ ಚೂಯಿಂಗ್ ಗಮ್‌ನಿಂದ ಉಸಿರುಗಟ್ಟಿಸುತ್ತಿರುವುದನ್ನು ಅರಿತುಕೊಂಡಳು. ಅವಳು ಕೂಡಲೇ ಅಲ್ಲಿದ್ದ ಯುವಕರ ಗುಂಪಿನ ಬಳಿಗೆ ಹೋದಳು. ತಡಮಾಡದೆ ಯುವಕರು ಬಾಲಕಿಗೆ ಸಹಾಯ ಮಾಡಿದ್ದಾರೆ.

ಯುವಕರ ತ್ವರಿತ ಕ್ರಮದಿಂದಾಗಿ ಆಗಬಹುದಾಗಿದ್ದ ಒಂದು ದುರಂತ ತಪ್ಪಿದೆ. ಬಾಲಕಿಯ ಪ್ರಾಣ ಕಾಪಾಡಿದ್ದಾರೆ. ಈ ವಿಡಿಯೊವನ್ನು path2shah ಅವರು Xನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದ ಶೀರ್ಷಿಕೆ ಹೀಗಿದೆ, ಕಣ್ಣೂರಿನ ಪಲ್ಲಿಕ್ಕರದಲ್ಲಿ ಎಂಟು ವರ್ಷದ ಮಗುವೊಂದು ಚೂಯಿಂಗ್‌ಗಮ್ ಸೇವಿಸಿ ಉಸಿರುಗಟ್ಟಿಸಲು ಪ್ರಾರಂಭಿಸಿದಾಗ ಯುವಕರ ಗುಂಪೊಂದು ಮಗುವನ್ನು ರಕ್ಷಿಸಿತು. ಮಗು ಅಸ್ವಸ್ಥಳಾಗಿ ಅವರ ಬಳಿಗೆ ಬಂದಿತು. ಅವರು ಬೇಗನೆ ಬಾಯಿಯಿಂದ ಚೂಯಿಂಗಮ್ ಹೊರಹಾಕಿಸಲು ಮುಂದಾದ್ರು. ಅವರ ಸಕಾಲಿಕ ಕ್ರಮಕ್ಕೆ ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಹೆಚ್ಚಿನ ಜನರು ಹೃದಯದಲ್ಲಿ ಕೆಟ್ಟವರಲ್ಲ ಎಂಬುದನ್ನು ಈ ವಿಡಿಯೊ ತೋರಿಸುತ್ತದೆ. ಅವರು ಧರ್ಮ ಅಥವಾ ಜಾತಿಯನ್ನು ಲೆಕ್ಕಿಸದೆ ಸಹಾಯ ಮಾಡಲು ಸಿದ್ಧರಿದ್ದಾರೆ. ನಮ್ಮ ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಜನರನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತಿರುವುದು ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ತಾನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ ಅತ್ಯಂತ ಹೃದಯಸ್ಪರ್ಶಿ ದೃಶ್ಯವಿದು ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!