ಉದಯವಾಹಿನಿ, ದುಬೈ: ಕ್ರಿಕೆಟ್ ಶಿಶು ನೇಪಾಳ ತಂಡ ಐತಿಹಾಸಿಕ ಸಾಧನೆಯೊಂದನ್ನು ಮಾಡಿದೆ. ಬಲಿಷ್ಠ ವೆಸ್ಟ್‌ ಇಂಡೀಸ್‌(Nepal vs West Indies) ತಂಡಕ್ಕೆ ಸೋಲಿನ ಶಾಕ್‌ ನೀಡಿದೆ. ಶಾರ್ಜಾದಲ್ಲಿ ನಡೆದ ಮೊದಲ ಟಿ20(NEP vs WI 1st T20I) ಪಂದ್ಯದಲ್ಲಿ 19 ರನ್‌ ಗೆಲುವು ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಎರಡನೇ ಪಂದ್ಯ ಸೆಪ್ಟೆಂಬರ್ 29 ರಂದು ನಡೆಯಲಿದೆ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಪೂರ್ಣ ಸದಸ್ಯ ರಾಷ್ಟ್ರದ ವಿರುದ್ಧ ನೇಪಾಳಕ್ಕೆ ಒಲಿದ ಮೊದಲ ಗೆಲುವು ಇದಾಗಿದೆ. ಈ ಗೆಲುವನ್ನು ನಾಯಕ ರೋಹಿತ್ ಪೌಡೆಲ್, ಇತ್ತೀಚೆಗೆ ಜನರಲ್ ಝಡ್ ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಅರ್ಪಿಸಿದರು.
“ಟೆಸ್ಟ್ ಆಡುವ ದೇಶವನ್ನು ಸೋಲಿಸಲು ಬಹಳ ಸಮಯ ಕಾಯಬೇಕಾಯಿತು. ಅದು ಕೂಡ ನಾವು ಯುಎಇಯಲ್ಲಿ ಆಯೋಜಿಸಿದ್ದ ಸರಣಿಯಲ್ಲಿ ಬಂದಿದೆ. ನಾವು ನಮ್ಮ ಕೌಶಲ್ಯಗಳನ್ನು ಮುಂದುವರಿಸಲಿದ್ದೇವೆ” ಎಂದು ನಾಯಕ ರೋಹಿತ್ ಹೇಳಿದರು.

ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆ ನೇಪಾಳ, ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. 12 ರನ್‌ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರ ವಿಕೆಟ್‌ ಕಳೆದುಕೊಂಡಿತು. ಆದರೆ ಆ ಬಳಿಕ ನಾಯಕ ನಾಯಕ ರೋಹಿತ್(38), ಕುಶಾಲ್ ಮಲ್ಲ(30) ಜತೆಯಾಟದ ನೆರವಿನಿಂದ 8 ವಿಕೆಟ್‌ಗೆ 148 ರನ್‌ ಬಾರಿಸಿತು.

Leave a Reply

Your email address will not be published. Required fields are marked *

error: Content is protected !!