ಉದಯವಾಹಿನಿ, ಬ್ರೆಜಿಲ್: ಗರ್ಭಧಾರಣೆ ತಡೆಯಲು ಅನೇಕ ವಿಧಗಳಿವೆ. ಕೆಲವರು ಮಾತ್ರೆಗಳನ್ನು ತೆಗೆದುಕೊಂಡರೆ ಇನ್ನು ಕೆಲವರು ಕಾಂಡೋಮ್‌ಗಳಂತಹ ವಸ್ತುಗಳನ್ನು ಬಳಸುತ್ತಾರೆ. ಅಂತಹದ್ದೇ ಒಂದು ಗರ್ಭ ನಿರೋಧಕ ಕಾಪರ್ ಟಿ ಮಗುವಿನ ಜನನದ ನಂತರ ಲೈಂಗಿಕ ಕ್ರಿಯೆ ನಡೆಸುವ ಇಚ್ಛೆಯಿದ್ದರೂ ಎಲ್ಲಿ ಮತ್ತೆ ಗರ್ಭಧರಿಸುತ್ತೀವೋ ಎನ್ನುವ ಆತಂಕ ಮಹಿಳೆಯರಿಗೆ ಸಾಮಾನ್ಯವಾಗಿ ಇರುತ್ತದೆ. ಅದಕ್ಕಾಗಿ ವಿವಿಧ ರೀತಿಯ ಗರ್ಭ ನಿರೋಧಕಗಳನ್ನು ಬಳಸುತ್ತಾರೆ. ಕಾಪರ್ ಟಿ ಕೂಡ ಒಂದು ಗರ್ಭನಿರೋಧಕವಾಗಿದ್ದು ಇದನ್ನು ಗರ್ಭಾಶಯದೊಳಗೆ ಸೇರಿಸಲಾಗುತ್ತದೆ.
ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಗರ್ಭ ನಿರೋಧಕ ಅಳವಡಿಕೆಯ ಬಳಿಕವೂ ಮಗುವೊಂದು ಜನಿಸಿದೆ. ಅಚ್ಚರಿ ಎಂದರೆ, ಈ ಮಗು ಹುಟ್ಟುವಾಗ ತಾನು ಹುಟ್ಟುಬಾರದೆಂದು ಅಂದ್ರೆ ಮಗು ಹುಟ್ಟಬಾರದು ಎಂದು ಅಳವಡಿಸಲಾಗಿದ್ದ ಕಾಪರ್ ಟೀಯನ್ನು ತನ್ನ ಕೈಯಲ್ಲಿ ಹಿಡಿದು ಜನಿಸಿದೆ. ಇದನ್ನು ಕಂಡ ವೈದ್ಯರು, ನರ್ಸ್ ಗಳು ಆಶ್ಚರ್ಯ ಚಕಿತರಾಗಿದ್ದು, ಮ್ಯಾಥ್ಯೂಸ್ ಗೇಬ್ರಿಯಲ್ ಎಂದು ಆ ಮಗುವಿಗೆ ಹೆಸರಿಡಲಾಗಿದೆ. ಘಟನೆ ಬ್ರೆಜಿಲ್‌ನಲ್ಲಿ ನಡೆದಿದ್ದು, ಹೆರಿಗೆ ಮಾಡಿಸಿದ ವೈದ್ಯರೇ ಈ ವಿಚಿತ್ರ ಬೆಳವಣಿಗೆ ಕಂಡು ಅಚ್ಚರಿಪಟ್ಟಿದ್ದಾರೆ. ಕಾಪರ್ ಟಿ ಬಳಸಿದ ನಂತರವೂ ಮಹಿಳೆಯೋರ್ವರಿಗೆ ಮಗು ಹುಟ್ಟಿರುವುದು ವಿಸ್ಮಯವಾಗಿ ಪರಿಣಮಿಸಿದೆ.
