ಉದಯವಾಹಿನಿ, ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋ ನಗರದ ಹೆದ್ದಾರಿಯಲ್ಲಿ ಮಂಗಳವಾರ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ವರದಿಗಳ ಪ್ರಕಾರ ಈ ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಈ ಹೆಲಿಕಾಪ್ಟರ್ ಮಕ್ಕಳ ಆಸ್ಪತ್ರೆಯಿಂದ ತೆರಳುತಿತ್ತು ಎಂದು ತಿಳಿದು ಬಂದಿದೆ. ವೀಡಿಯೊದಲ್ಲಿ ಹೆದ್ದಾರಿಯ ಸಮೀಪದಲ್ಲಿ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿ ತಿರುಗುತ್ತಿರುವುದನ್ನು ತೋರಿಸಲಾಗಿದೆ. ಕ್ಯಾಲಿಫೋರ್ನಿಯಾದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದ ನಂತರದ ಘಟನೆಯನ್ನು ತೋರಿಸುವ ಒಂದು ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.
ವರದಿಗಳ ಪ್ರಕಾರ, ಈ ಘಟನೆ ಸ್ಥಳೀಯ ಸಮಯ ಸುಮಾರು ಸಂಜೆ 7.10 ಕ್ಕೆ (ಸ್ಥಳೀಯ ಸಮಯ) ಹೋವೆ ಅವೆನ್ಯೂ ಬಳಿಯ ಹೆದ್ದಾರಿ 50 ರ ಪೂರ್ವ ದಿಕ್ಕಿನ ಲೇನ್‌ಗಳಲ್ಲಿ ಸಂಭವಿಸಿದೆ. ಅಪಘಾತದ ನಂತರ ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನ ಸಂಚಾರವನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು. ಅವಶೇಷಗಳಡಿಯಲ್ಲಿ ಹಲವರು ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸಾವು ನೋವುಗಳ ಕುರಿತು ಇದುವರೆಗೂ ವರದಿಯಾಗಿಲ್ಲ.
ಕಳೆದ ಎಪ್ರಿಲ್‌ನಲ್ಲಿ ನ್ಯೂಯಾರ್ಕ್‌ನ ಹಡ್ಸನ್ ನದಿಯ (Hudson River) ಮೇಲೆ ಹೆಲಿಕಾಪ್ಟರ್ ಪತನಗೊಂಡು (Helicopter Crash) ಆರು ಜನರು (6 Death0 ಸಾವನ್ನಪ್ಪಿದ್ದರು. ಪಿಯರ್ 40 ಬಳಿ ಈ ಅಪಘಾತ ಸಂಭವಿಸಿದ್ದು, ಅಪಘಾತಕ್ಕೀಡಾದ ಹೆಲಿಕಾಪ್ಟರ್ ಬೆಲ್ 206L-4 ಲಾಂಗ್‌ರೇಂಜರ್ IV ಆಗಿತ್ತು. ಈ ಹೆಲಿಕಾಪ್ಟರ್ ನಗರದ ವೈಮಾನಿಕ ನೋಟವನ್ನು ನೀಡಲು ಪ್ರವಾಸಿಗರನ್ನು ಕರೆತಂದಿತ್ತು ಎನ್ನಲಾಗಿದೆ. ಈ ಹೆಲಕಾಪ್ಟರ್​​ ಜನರನ್ನು ಹೊತ್ತೊಯ್ಯುತ್ತಾ ಮೊದಲಿಗೆ ಲೋವರ್ ಮ್ಯಾನ್‌ಹ್ಯಾಟನ್‌ನಿಂದ ಹಾರಿದೆ. ಅದು ಸ್ವಾತಂತ್ರ್ಯ ಪ್ರತಿಮೆಯ ಸುತ್ತ ಸುತ್ತುತ್ತಾ ನಂತರ ಹಡ್ಸನ್ ನದಿಯ ಉದ್ದಕ್ಕೂ ಉತ್ತರಕ್ಕೆ ಜಾರ್ಜ್ ವಾಷಿಂಗ್ಟನ್ ಸೇತುವೆಯ ಕಡೆಗೆ ಸಾಗಿದೆ. ಇದಾದ ನಂತರ ಅದು ದಕ್ಷಿಣಕ್ಕೆ ತಿರುಗಿ ನ್ಯೂಜೆರ್ಸಿ ಬಳಿ ನದಿಗೆ ಬಿದ್ದಿತ್ತು.

Leave a Reply

Your email address will not be published. Required fields are marked *

error: Content is protected !!