ಉದಯವಾಹಿನಿ, ಚಿಕ್ಕಬಳ್ಳಾಪುರ: ಆಕೆ ಬಿಕಾಂ ಪದವೀಧರೆ ಕೆಲಸ ಹುಡುಕೋಣ ಅಂತ ಹಳ್ಳಿಯಿಂದ ನಗರಕ್ಕೆ ಬಂದಿದ್ಲು. ಆದ್ರೆ ಕೆಲಸ ಸಿಗಲಿಲ್ಲ ಹೀಗಾಗಿ ಮರಳಿ ಹಳ್ಳಿಯತ್ತ ನಡೆದುಕೊಂಡು ಹೋಗ್ತಿದ್ದ ಯುವತಿಗೆ ದಾರಿ ಮಧ್ಯೆ ಡ್ರಾಪ್ ಕೋಡೋದಾಗಿ ಹೇಳಿ ಕರೆದೊಯ್ದ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಪಾಪಿ ತಾನು ಮಾತ್ರವಲ್ಲದೇ ಸ್ನೇಹಿತನನ್ನ ಕರೆದುಕೊಂಡು ಹೋಗಿ ಮತ್ತೆ ಮತ್ತೆ ಆಕೆ ಮೇಲೆ ಅತ್ಯಾಚಾರ ನಡೆಸಿದ್ದಾನೆ.
ಇಡೀ ಸಮಾಜವೇ ತಲೆತಗ್ಗಿಸುವಂತಹ ಹೇಯ ಕೃತ್ಯ ನಡೆದಿದ್ದು ಚಿಕ್ಕಬಳ್ಳಾಪುರದಲ್ಲಿ. ಹೌದು. ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದ ಕಣಿವೆ ಪ್ರದೇಶದ ಬಡಾವಣೆಯೊಂದರಲ್ಲಿ ಕಾಮುಕನೊಬ್ಬ ಡ್ರಾಪ್ ಕೊಡುವ ನೆಪದಲ್ಲಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.
ಸಂತ್ರಸ್ತೆ ಚಿಕ್ಕಬಳ್ಳಾಪುರದ ಹಳ್ಳಿಯೊಂದರ ನಿವಾಸಿ. ಬಿಕಾಂ ಪಧವೀಧರೆಯಾಗಿದ್ದು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು. ಕೆಲಸ ಹುಡುಕಿಕೊಂಡೇ ಚಿಕ್ಕಬಳ್ಳಾಪುರಕ್ಕೆ ಬಂದಿದ್ದಾಳೆ. ಕೆಲಸ ಸಿಗದೇ ಇದ್ದಾಗ ತಮ್ಮೂರಿಗೆ ತಮ್ಮೂರಿಗೆ ವಾಪಸ್ ಹೋಗೋಣ ಅಂತ ಚಿಕ್ಕಬಳ್ಳಾಪುರ ಗೌರಿಬಿದನೂರು ಮಾರ್ಗದಲ್ಲಿ ಹೆಜ್ಜೆ ಹಾಕಿದ್ದಳು. ಇದೇ ದಾರಿಯಲ್ಲಿ ಸಾಗುತ್ತಿದ್ದ ಚಿಕ್ಕಬಳ್ಳಾಪುರದ ಟ್ರ‍್ಯಾಕ್ಟರ್ ಮೆಕ್ಯಾನಿಕ್ ಸಿಖಂದರ್ ಎಂಬಾತ ರಸ್ತೆಯಲ್ಲಿ ಒಂಟಿ ಯುವತಿ ಕಂಡು ಡ್ರಾಪ್ ಕೊಡುವ ನೆಪದಲ್ಲಿ ಸ್ಕೂಟಿ ಹತ್ತಿಸಿಕೊಂಡಿದ್ದಾನೆ. ಸೀದಾ ಗೌರಿಬಿದನೂರು ಮಾರ್ಗದ ಕಣಿವೆ ಇಳಿತಿದ್ದಂತೆ ಬಡಾವಣೆಯೊಂದರೊಳಗೆ ಸ್ಕೂಟಿ ತಿರುಗಿಸಿ ಅಲ್ಲೇ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ
