ಉದಯವಾಹಿನಿ,ಟಿಪ್ಸ್ : ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾಕಷ್ಟು ವಿಡಿಯೋಗಳು ವೈರಲ್​​ ಆಗುತ್ತಾ ಇರುತ್ತದೆ. ಹಾಗೆಯೇ ಮನೆಯ ಗಾರ್ಡನಿಂಗ್​​ಗೆ ಸಂಬಂಧಪಟ್ಟ ಹಲವಾರು ಪೋಸ್ಟ್​​ಗಳನ್ನು ಕೂಡ ನೋಡಿರುತ್ತೀರಿ. ಕೈತೋಟದಲ್ಲಿ ಉತ್ತಮವಾಗಿ ಗಿಡವನ್ನು ಬೆಳೆಸಿದರೂ ಕೆಲವೊಮ್ಮೆ ಗಿಡಕ್ಕೆ ರೋಗ ಬಂದು ಫಸಲು ಕೊಡದೆ ಹಾಗೆಯೇ ಒಣಗಿ ಹೋಗುತ್ತದೆ. ಅದಕ್ಕಾಗಿ ರಾಸಾಯನಿಕ ಔಷಧಿ ಬಳಸುವ ಬದಲು ಮನೆಯಲ್ಲಿಯೇ ಔಷಧವನ್ನು ಬಳಸಿದರೆ ಉತ್ತಮ. ಮನೆ ಮುಂದೆ ಹಸಿರಾಗಿದ್ದರೆ ಎಷ್ಟು ಚೆಂದ. ಮನಸ್ಸಿಗೂ ಒಂದು ರೀತಿ ಹಿತವೆನಿಸುತ್ತದೆ. ಒತ್ತಡವನ್ನು ತಗ್ಗಿಸಲು ಸಹಾಯಕಾರಿ. ಅಷ್ಟೇ ಅಲ್ಲ ವಾತಾವರಣ ಕೂಡ ತಂಪಾಗಿರುತ್ತದೆ.

ಗಾರ್ಡನಿಂಗ್ ಮಾಡುವವರಿಗಾಗಿ ಕೆಲ ಟಿಪ್ಸ್:-

1> ಮೊಟ್ಟೆ ಚಿಪ್ಪುನಲ್ಲಿ ಬೀಜ ಹಾಕಿ ಮೊಳಕೆ ಬರಿಸುವುದು: ಇಂತಹ ವಿಡಿಯೋಗಳನ್ನು ನೀವೂ ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೀರಿ. ಜೊತೆಗೆ ನೀವೂ ಕೂಡ ಮನೆಯಲ್ಲಿ ಪ್ರಯತ್ನಿಸಿ ಇರಬಹುದು. ಆದರೆ ಈ ಹ್ಯಾಕ್‌ನ ಹಿಂದಿನ ಕಲ್ಪನೆಯೆಂದರೆ, ಮೊಳಕೆಗೆ ಮಿಶ್ರಗೊಬ್ಬರವನ್ನು ಪಡೆಯಲು ನೀವು ಮೊಟ್ಟೆ ಚಿಪ್ಪನ್ನು ಮರುಬಳಕೆ ಮಾಡಬಹುದು. ಮೊಟ್ಟೆಯ ಚಿಪ್ಪು ಸಣ್ಣ ಸಸ್ಯಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿರುತ್ತದೆ.

2> ಬಾಳೆ ಸಿಪ್ಪೆಯ ರಸಗೊಬ್ಬರ: ಬಾಳೆಹಣ್ಣು ತಿಂದ ನಂತರ ಅದರ ಸಿಪ್ಪೆಯನ್ನು ಎಸೆಯುವ ಬದಲು ನೀವು ಬಾಳೆಹಣ್ಣಿನ ಸಿಪ್ಪೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮತ್ತು ಒಂದು ಡಬ್ಬದಲ್ಲಿ ನೀರಿನಲ್ಲಿ ನೆನೆಸಿಡಿ. ಇದು ಸಸ್ಯಗಳ ಬೆಳವಣೆಗೆಗೆ ಬೇಕಾಗುವ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ನೀಡುತ್ತದೆ.

 

3> ಕಾಫಿಯ ಜರಟಾ ಅಥವಾ ಜಗಟು: ನೀವು ಕಾಫಿ ಮಾಡಿಕೊಂಡ ನಂತರ ಅದನ್ನು ಪುಡಿ ಅಥವಾ ಜಗಟನ್ನು ನೀವು ಬಿಸಾಕುವ ಬದಲು, ಗಿಡಗಳಿಗೆ ಬಳಸಬಹುದು. ಇದು ನಿಮ್ಮ ಗಾರ್ಡನ್​​ನಲ್ಲಿ ಇರುವೆ, ಚಿಗಟೆ, ಸೊಳ್ಳೆಗಳು ಹಾಗೂ ಯಾವುದೇ ಕೀಟಗಳು ಬರದಂತೆ ನೋಡಿಕೊಳ್ಳುತ್ತದೆ.

4> ಆಲೂಗಡ್ಡೆಯಲ್ಲಿ ಗುಲಾಬಿ ಗಿಡ ನೆಡುವುದು: ಸಾಮಾಜಿಕ ಜಾಲತಾಣದಲ್ಲಿ ಇಂತಹ ವಿಡಿಯೋಗಳು ಸಾಕಷ್ಟು ಹರಿದಾಡುತ್ತಿರುತ್ತವೆ. ಇದು ನಿವಾಗಿಯೂ ಪ್ರಯೋಜನಕಾರಿಯೇ ಎಂಬುದು ಸಾಕಷ್ಟು ಜನರಿಗೆ ಕಾಡುವ ಪ್ರಶ್ನೆಯಾಗಿದೆ. ಆಲೂಗಡ್ಡೆಯಲ್ಲಿ ಎಥಿಲೀನ್ ಸಮೃದ್ದವಾಗಿದ್ದು, ಇದು ಗಿಡಗಳ ಬೆಳವಣಿಗೆಗೆ ಸಹಾಯಕವಾಗಿದೆ.

5> ಟೀಲೈಟ್ ಮೇಣದಬತ್ತಿ ಬಳಸುವುದು: ಇದು ಸಾಮಾನ್ಯವಾಗಿ ಗೊತ್ತೇ ಇರುವ ವಿಷಯ. ಹೈಸ್ಕೂಲ್​​ನ ಭೌತಶಾಸ್ತ್ರದಲ್ಲಿ ಹಸಿರು ಮನೆ ಪರಿಣಾಮಗಳ ಬಗ್ಗೆ ನೀವು ಕೇಳಿರುತ್ತೀರಿ. ಈ ರೀತಿಯಾಗಿ ಟೀಲೈಟ್ ಮೇಣದಬತ್ತಿಯನ್ನು ಬಳಸುವುದರಿಂದ ನಿಮ್ಮ ಹಸಿರುಮನೆಯ ಸುತ್ತಲೂ ಈ ಅದ್ಭುತವಾದ ಶಾಖವನ್ನು ಹೊರಸೂಸುತ್ತದೆ ಮತ್ತು ಸಸ್ಯಗಳನ್ನು ಬೆಚ್ಚಗಾಗಿಸುತ್ತದೆ ಎಂಬುದು ಕಲ್ಪನೆ.

Leave a Reply

Your email address will not be published. Required fields are marked *

error: Content is protected !!