ಉದಯವಾಹಿನಿ, ನವದೆಹಲಿ: ನಟ ನಿಹಾಲ್ ಪಿಳ್ಳೈ ಮಲಯಾಳಂನ ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದುಕೊಂಡಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಅವರ ‘ಮುಂಬೈ ಪೊಲೀಸ್’ ಮತ್ತು ‘ಟಿಯಾನ್’ ಸಿನಿಮಾದಲ್ಲಿನ ನಟನೆಗಾಗಿ ಇವರು ಹೆಚ್ಚು ಹೆಸರು ಮಾಡಿದ್ದರು. ಸದ್ಯ ಅವರು ತಮ್ಮ ಯೂಟ್ಯೂಬ್ ಚಾನೆಲ್ ‘ಒರು ಹ್ಯಾಪಿ ಫ್ಯಾಮಿಲಿ’ ಮೂಲಕ ಹಲವು ಇಂಟ್ರಸ್ಟಿಂಗ್ ವಿಚಾರಗಳನ್ನು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಬಾಲ್ಯದಲ್ಲಿ ತಮಗೆ ಆದ ಲೈಂಗಿಕ ದೌರ್ಜನ್ಯದ ಆಘಾತ ಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಈ ನೋವಿನ ನೆನಪುಗಳು ಇಂದಿಗೂ ತಮ್ಮ ಮೇಲೆ ಬಹಳಷ್ಟು ಪರಿಣಾಮ ಬೀರುತ್ತಿವೆ ಎಂದು ಅಚ್ಚರಿಯ ಸಂಗತಿಯನ್ನು ಹೇಳಿ ಕೊಂಡಿದ್ದಾರೆ.

ನಟ ನಿಹಾಲ್ ಪಿಳ್ಳೈನಟಿ ಪ್ರಿಯಾ ಮೋಹನ್ ಅವರ ಪತಿ ಮತ್ತು ಪೂರ್ಣಿಮಾ ಇಂದ್ರಜಿತ್ ಅವರ ಸಹೋದರ ಆಗಿದ್ದು ಮಲಯಾಳಂ ಸಿನಿಮಾದಲ್ಲೇ ಹೆಚ್ಚಾಗಿ ನಟಿಸಿದ್ದಾರೆ‌. ಇತ್ತೀಚೆಗೆ ತಮ್ಮ ಆಪ್ತ ರೊಬ್ಬರ ಮಗುವಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ಆದ ಬೆನ್ನಲ್ಲೇ ಈ ಬಗ್ಗೆ ಸಾರ್ವಜನಿಕವಾಗಿ ಅವರು ಮಾತನಾಡಿದ್ದು ತನಗೂ ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಬಹಿರಂಗ ಪಡಿಸಿದ್ದಾರೆ.

ನಿಹಾಲ್ ಪಿಳ್ಳೈ ತಮ್ಮ ಬಾಲ್ಯದ ಲೈಂಗಿಕ ಕಿರುಕುಳದ ನೋವಿನ ಅನುಭವವನ್ನು ಹಂಚಿಕೊಂಡಿ ದ್ದಾರೆ. ತನಗೆ ಎರಡು ಬಾರಿ ಲೈಂಗಿಕ ಕಿರುಕುಳವಾಗಿದೆ.”ನಾನು ಇದನ್ನು ಸಾರ್ವಜನಿಕವಾಗಿ ಹೇಳು ತ್ತೇನೆ ಎಂದು ಎಂದೂ ಅಂದುಕೊಂಡಿರಲಿಲ್ಲ. ಈ ಘಟನೆಗಳು ತನಗೆ ಬಹಳ ನೋವಿನಿಂದ ಕೂಡಿದ್ದವು ಮತ್ತು ಈ ಆಘಾತ ಇನ್ನೂ ನನ್ನಲ್ಲಿದೆ,” ಎಂದು ಅವರು ತಮ್ಮ ವಿಡಿಯೋದಲ್ಲಿ ಹೇಳಿ ಕೊಂಡಿದ್ದಾರೆ.ನಾನು ವಾಸವಿದ್ದ ಮನೆಯ ಹತ್ತಿರ, ಒಂದು ಶೂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತನಗೆ ದೌರ್ಜನ್ಯ ಎಸಗಿದ್ದರು. ಬಾಲ್ಯದಲ್ಲಿ ತಮಗೆ ಎಂಟು-ಒಂಬತ್ತು ವರ್ಷ ವಯಸ್ಸಿದ್ದಾಗ, ಫುಟ್‌ಬಾಲ್ ಸ್ಟಿಕ್ಕರ್‌ಗಳನ್ನು ನೀಡುವುದಾಗಿ ಆಮಿಷವೊಡ್ಡಿ ತನ್ನನ್ನು ಸೇರಿಸಿ ಮೂವರು ಮಕ್ಕಳನ್ನು ಕೋಣೆಯೊಳಗೆ ಕರೆದಿದ್ದರು. ಆ ಸಂದರ್ಭದಲ್ಲಿ ಆ ವ್ಯಕ್ತಿ ಮತ್ತೊಬ್ಬ ಹುಡು ಗನ ಒಳಗೆ ಕರೆದು ಅವನ ಪ್ಯಾಂಟ್ ಎಳೆಯಲು ಪ್ರಯತ್ನಿಸಿದ್ದು ಇನ್ನೂ ನೆನಪಿದೆ… ಆ ಕೋಣೆಯ ವಾಸನೆ ಇಂದಿಗೂ ನನ್ನನ್ನು ಕಾಡುತ್ತದೆ‌ ಎಂದು ಹೇಳಿದ್ದಾರೆ. ಕುವೈತ್ ನಲ್ಲಿ ಎದುರಿಸಿದ ಮತ್ತೊಂದು ಘಟನೆಯನ್ನೂ ಕೂಡ ನಿಹಾಲ್ ಹಂಚಿಕೊಂಡಿದ್ದಾರೆ. ಕುವೈತ್‌ನಲ್ಲಿ ನೆಲೆಸಿದ್ದಾಗ, ಒಬ್ಬ ಅರಬ್ ಪ್ರಜೆಯಿಂದ ನಡೆಯಲಿದ್ದ ಮತ್ತೊಂದು ದೌರ್ಜನ್ಯದ ಪ್ರಯತ್ನದಿಂದ ತಾನು ಸಮಯಪ್ರಜ್ಞೆಯಿಂದ ಪಾರಾಗಿದ್ದೆ ಎಂದು ನಿಹಾಲ್ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು ಅದನ್ನು ತಡೆಯಲು ಮತ್ತು ಅಂತಹ ಪರಿಸ್ಥಿತಿಯನ್ನು ನಿರ್ವಹಿಸಲು ವಯಸ್ಕರು ಹೇಗೆ ಜಾಗೃತ‌ ರಾಗಿರಬೇಕು ಎಂಬ ಬಗ್ಗೆಯೂ ಅವರು ಸಲಹೆಗಳನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!